ಅಶ್ಲೀಲವಾಗಿ ಫೊಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ದೈಹಿಕ ಸಂಪರ್ಕಕ್ಕೆ ಒತ್ತಾಯ; ಕೊಲೆ ಬೆದರಿಕೆ! ನೊಂದ ಮಹಿಳೆಯಿಂದ ದೂರು.. ರಾಜ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Share with

ಬೆಳ್ತಂಗಡಿ: ವಿಡಿಯೋ ಕಾಲ್ ಮೂಲಕ ಪೋಟೋವನ್ನು ಪಡೆದು ಅದನ್ನು ಆಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದಲ್ಲದೆ, ಕರೆಮಾಡಿ ದೈಹಿಕ ಸಂಪರ್ಕಕ್ಕೆ ಬರುವಂತೆ ಒತ್ತಾಯಿಸಿ, ಸಹಕರಿಸದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಆರೋಪಿಸಿ, ಮಹಿಳೆಯೋರ್ವರು ನೀಡಿದ ದೂರಿನಂತೆ ಹತ್ಯಡ್ಕ ಗ್ರಾಮದ ಕಾಪಿನಡ್ಕ ಎಂಬಲ್ಲಿಯ ನಿವಾಸಿ ಕೆ.ಕೆ ರಾಜ ಎಂಬಾತನ ಮೇಲೆ ಧರ್ಮಸ್ಥಳ ಠಾಣೆಯಲ್ಲಿ ಅ.15ರಂದು ಪ್ರಕರಣ ದಾಖಲಾಗಿದೆ.

ರಾಜ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ನೊಂದ ಮಹಿಳೆ ನೀಡಿದ ದೂರಿನಲ್ಲಿ ಹತ್ಯಡ್ಕ ಗ್ರಾಮದ ಕಾಪಿನಡ್ಕ ಎಂಬಲ್ಲಿಯ ನಿವಾಸಿ ಕೆ.ಕೆ ರಾಜ ಎಂಬಾತ ವೀಡಿಯೋ ಕಾಲ್ ನ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ 2023 ಮೇ 29ರಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಇದನ್ನು ತಾನು ಗಮನಿಸಿರಲಿಲ್ಲ. ಅಲ್ಲದೆ ಆರೋಪಿ ನನ್ನ ಮೊಬೈಲ್‌ಗೆ ಕರೆ ಮಾಡಿ ದೈಹಿಕ ಸಂಪರ್ಕಕ್ಕೆ ಬರುವಂತೆ ಒತ್ತಾಯಿಸಿದಲ್ಲದೆ, ದೈಹಿಕ ಸಂಪರ್ಕಕ್ಕೆ ಸಹಕರಿಸದೇ ಇದ್ದರೆ, ಒಬ್ಬಳೆ ಮನೆಯಲ್ಲಿರುವ ಸಮಯ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಆತನ ಮೇಲಿನ ಭಯದಿಂದ ಈ ವಿಚಾರವನ್ನು ನನ್ನ ಮನೆಯವರಿಗೆ ತಿಳಿಸಿರಲಿಲ್ಲ. ಆದರೆ ದೈಹಿಕ ಸಂಪರ್ಕಕ್ಕೆ ಸಹಕರಿಸದೇ ಇದ್ದರೆ, ನೀಲಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮಾನ ಕಳೆಯುವುದಾಗಿ ಬೆದರಿಕೆ ಹಾಕಿದ್ದ ಇದರಿಂದ ಭಯಗೊಂಡು ಈ ವಿಚಾರವನ್ನು ನಾನು ತಾಯಿ ಮತ್ತು ತಮ್ಮನಿಗೆ ತಿಳಿಸಿದ್ದು, ಆತ ಎಡಿಟ್ ಮಾಡಿ ಆಶ್ಲೀಲ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು ನಂತರ ತಿಳಿದು ಬಂತು, ಆರೋಪಿ ಪದೇ ಪದೇ ರಾತ್ರಿ 9 ಗಂಟೆಯ ಬಳಿಕ ಬರುವಂತೆ ಒತ್ತಾಯಪಡಿಸಿ, ಬೆದರಿಕೆ ಹಾಕುತ್ತಿದ್ದು, ಆತನ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ದೂರನ್ನು ಸ್ವೀಕರಿಸಿದ ಧರ್ಮಸ್ಥಳ ಪೊಲೀಸರು ಆರೋಪಿಯ ಮೇಲೆ ಐಪಿಸಿ 1880 (U-354(1) (0) 354(1)(0.35409506) abo ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Share with

Leave a Reply

Your email address will not be published. Required fields are marked *