ಒಡಿಯೂರು: ಒಡಿಯೂರು ಶ್ರೀ ಜನ್ಮ ದಿನೋತ್ಸವ ಸೇವಾ ಸಂಭ್ರಮದ ಅಂಗವಾಗಿ ಬೃಹತ್ ವೈದ್ಯಕೀಯ ಸೇವಾ ಶಿಬಿರ

Share with



ವಿಟ್ಲ: ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳವರ ಜನ್ಮ ದಿನೋತ್ಸವದ ಸೇವಾ ಸಂಭ್ರಮದ ಅಂಗವಾಗಿ ಭಾನುವಾರ ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಬೃಹತ್ ವೈದ್ಯಕೀಯ ಸೇವಾ ಶಿಬಿರ ನಡೆಯಿತು.
ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಗಳವರು ಮಾನವ ಸೇವೆಯೇ ಮೂಲಕ ಮಾಧವ ಸೇವೆಯನ್ನು ಕಾಣುವುದೇ ನಿಜವಾದ ಸಾರ್ಥಕ ಬದುಕು. ಆರೋಗ್ಯವನ್ನು ರಕ್ಷಿಸಿಕೊಂಡು ಉತ್ತಮ ಜೀವನ ನಡೆಸಬೇಕು. ರಕ್ತದಾನ ಎಂದರೆ ಪ್ರಾಣ ದಾನೆ ಎಂದರ್ಥ. ಪ್ರತಿಯೊಬ್ಬರೂ ಆಹಾರ ನಿಯಮವನ್ನು ಪಾಲಿಸಿಕೊಂಡಾಗ ಆರೋಗ್ಯ ಸಮಸ್ಥಿತಿಯಲ್ಲಿಡಲು ಸಾಧ್ಯವಿದೆ. ಆಧ್ಯಾತ್ಮಿಕತೆಯಲ್ಲಿ ಪ್ರೀತಿ ಭಾವ ಅಂಕುರಿಸುತ್ತದೆ ಎಂದು ನುಡಿದರು.
ಶ್ರೀ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ದೇರಳಕಟ್ಟೆ ದಂತ ವೈದ್ಯಕೀಯ ಮಹಾ ವಿದ್ಯಾಲಯದ  ಸೀನಿಯರ್ ಲೆಕ್ಚರರ್   ಡಾ.ತಾರಾಚಂದ್ರನ್,
ಮಂಗಳೂರು ವೆನ್ ಲಾಕ್ ಆಸ್ಪತ್ರೆ ರಕ್ತ ನಿಧಿ ವಿಭಾಗದ ಮುಖ್ಯಸ್ಥ ಡಾ.ಶರತ್ ಕುಮಾರ್ ಜೆ ರಾವ್,  ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೃಷ್ಣಮೂತಿ೯ ಡಿ, ಒನ್ ಸೈಟ್ ಎಸ್ಸಿಲೋರ್ ಲಕ್ಸೋಟಿಕ್ ಫೌಂಡೇಶನ್, ಬೆಂಗಳೂರು ಇದರ ಮುಖ್ಯ ವ್ಯವಸ್ಥಾಪಕ   ಧಮ೯ಪ್ರಸಾದ್ ರೈ, 
ಮಂಗಳೂರು ಪ್ರಸಾದ್ ನೇತ್ರಾಲಯದ ವೈದ್ಯ ಡಾ.ಶ್ರೀ ಕೀರ್ತಿ,
ಮಂಗಳೂರು ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ  ಡಾ. ಹೇಮಾವಾಣಿ, ವೈದ್ಯಾಧಿಕಾರಿ  ಡಾ. ಕೃಷ್ಣ ಪ್ರಸಾದ್,
ಒಡಿಯೂರು ಶ್ರೀ ಗಳ ಜನ್ಮದಿನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಉಡುಪಿ ವಲಯದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಅಶೋಕ್ ಕುಮಾರ್ ಬಿಜೈ ಉಪಸ್ಥಿತರಿದ್ದರು.

ಒಡಿಯೂರು ಶ್ರೀ ಜನ್ಮ ದಿನೋತ್ಸವ ಸೇವಾ ಸಂಭ್ರಮ ಗ್ರಾಮೋತ್ಸವ ಸಮಿತಿ, ಜಸ್ಟಿಸ್ ಕೆ.ಎಸ್.ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ , ಎಂ.ಬಿ.ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯ, ಮಂಗಳೂರು ಪ್ರಸಾದ್ ನೇತ್ರಾಲಯ, ಒನ್ ಸೈಟ್ ಎಸ್ಸಿಲೋರ್ ಲಕ್ಸೋಟಿಕ್ ಫೌಂಡೇಶನ್, ಬೆಂಗಳೂರು, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ವಿಭಾಗ, ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರ ಇವುಗಳ ಜಂಟಿ ಸಹಭಾಗಿತ್ವದಲ್ಲಿ ನಡೆದ ಶಿಬಿರದ ವಿವಿಧ ವಿಭಾಗಗಳಲ್ಲಿ ಒಟ್ಟು 673 ಮಂದಿ ಪ್ರಯೋಜನ ಪಡೆದು ಕೊಂಡರು.
ಒಡಿಯೂರು ಶ್ರೀ ಜನ್ಮ ದಿನೋತ್ಸವ ಜನ್ಮ ದಿನೋತ್ಸವ ಸೇವಾ ಸಮಿತಿಯ ಮಾತೇಶ್ ಭಂಡಾರಿ ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಮೇಲ್ವಿಚಾರಕಿ ಲೀಲಾ ವಂದಿಸಿದರು. ಯಶು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *