ಒಡಿಯೂರು ಶ್ರೀ ಜನ್ಮ ದಿನೋತ್ಸವ -ಗ್ರಾಮೋತ್ಸವ ಸಮಾಲೋಚನಾ ಸಭೆ

Share with

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಆಗಸ್ಟ್ ೮ರಂದು ನಡೆಯಲಿರುವ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವ ೨೦೨೪ ಆಚರಣೆಯ ಬಗ್ಗೆ  ಸಮಾಲೋಚನಾ ಸಭೆ ನಡೆಯಿತು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ನಾವು ಮಾಡುವ ಸೇವೆಯೇ ಸಾಧನೆ ಹಾಗೂ ಸಾಧನವಾಗಿ ಪರಿವರ್ತನೆಯಾಗಬೇಕು. ಹುಡುಕಿ ಮಾಡುವ ಸೇವೆಯಿಂದ ಸಾರ್ಥಕ್ಯದೊಂದಿಗೆ ಆನಂದವನ್ನು ಪಡೆಯಬಹುದು. ಸಮಾಜವೂ ಬದುಕಬೇಕೆಂಬ ಚಿಂತನೆಯಲ್ಲಿ ಮನುಷ್ಯ ಮುನ್ನಡೆದಾಗ ಉತ್ತಮ ಬೆಳೆವಣಿಗೆಯಾಗುತ್ತದೆ.  ಜನ ಸೇವೆ ಜನಾರ್ಧನನಿಗೆ ಪ್ರಿಯವಾಗಿದ್ದು, ಜನ ಪರವಾಗಿ ಮಾಡುವ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ. ಸಮಾಜಮುಖಿಯಾದ ಸೇವೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಜನ್ಮದಿನೋತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದರು.
ಸ್ವಚ್ಛತಾ ಕಾರ್ಯ ನಡೆಸಿದ ರೀತಿಯಲ್ಲೇ ಮತ್ತೆ ಕಸ ಸುರಿಯುವ ಕಾರ್ಯವಾಗುತ್ತಿದ್ದು, ಇದಕ್ಕಾಗಿ ಜನರ ಮನಸ್ಸಿನಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಕಸ ವಿಲೇವಾರಿಯ ಬಗ್ಗೆಯೂ ಚಿಂತನೆಯನ್ನು ನಡೆಸಬೇಕಾಗಿದೆ. ಕಾನೂನು ಮಾಹಿತಿ, ಆರೋಗ್ಯ ಸೇವೆ, ಸ್ವಚ್ಛತೆ ಸೇರಿ ಜನಪರವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿದೆ. ಮನೆಗೊಂದು ಔಷಧೀಯ ಸಸ್ಯ ನೆಡುವ ಮೂಲಕ ಪಕೃತಿಯ ಉಳಿವಿಗೆ ಕೊಡುಗೆ ನೀಡಬೇಕಾಗಿದೆ. ಪ್ರೀತಿಯ ಬಲದಲ್ಲಿ ಲೋಕವನ್ನು ಗೆಲ್ಲಬಹುದು ಎಂದು ತಿಳಿಸಿದರು.

ಸಾಧ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿವಿಧ ಸಮಿತಿಗಳ ರಚನೆಯನ್ನು ಮಾಡಲಾಗಿತು. ಗ್ರಾಮೋತ್ಸವದ ಅಂಗವಾಗಿ ನಡೆಸುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ತುಲಾಭಾರ ಸೇವೆಯನ್ನು ಜೇನು ತುಪ್ಪದಲ್ಲಿ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ವಿಟ್ಲ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಎ. ಸುರೇಶ್ ರೈ, ಒಡಿಯೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ನಿರ್ದೇಶಕ ಕಿರಣ್ ಉರ್ವ, ಗುರುದೇವ ವಿದ್ಯಾ ಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ಮತ್ತಿತರರು ಉಪಸ್ಥಿತರಿದ್ದರು.

ಶ್ರದ್ಧಾ ಪ್ರಾರ್ಥಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಲಿಂಗಪ್ಪ ಗೌಡ ಪನೆಯಡ್ಕ ವಂದಿಸಿದರು.


Share with

Leave a Reply

Your email address will not be published. Required fields are marked *