ಮಂಜೇಶ್ವರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗೆ ಪದಾಧಿಕಾರಿಗಳು

Share with

ಹೊಸಂಗಡಿ :ಮಂಜೇಶ್ವರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 44ನೇ ವರ್ಷದ ನೂತನ ಪದಾಧಿಕಾರಿಗಳಾಗಿ ಹೊಸಂಗಡಿ ಶ್ರಿ ಅಯ್ಯಪ್ಪ ಕ್ಷೇತ್ರದಲ್ಲಿ ನಡೆದ ಮಾಹಾ ಸಭೆ ಯಲ್ಲಿ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ರೋಹಿದಾಸ್ ಎಸ್ ಬಂಗೇರ .ಅಧ್ಯಕ್ಷರಾಗಿ ನ್ಯಾಯವಾದಿ ನವೀನ್ ರಾಜ್ ಕೆ ಜೆ ಪ್ರನಾರಾಯ್ಕಿಯಾದರು.
ಪ್ರಧಾನ ಕಾರ್ಯದರ್ಶಿ ಯಾಗಿ ಸುರೇಶ್ ಗಾಣಿಂಜಾಲ್
ಕೋಶಾಧಿಕಾರಿಯಾಗಿ ನರೇಂದ್ರ ಹೆಗಡೆ ಆಯ್ಕೆಯಾದರು . ಸಭೆಯ ಅಧ್ಯಕ್ಷತೆಯನ್ನು ಪ್ರಸ್ತುತ ಅಧ್ಯಕ್ಷರಾದ ನವೀನ್ ರಾಜ್ ಕೆ.ಜೆ ವಹಿಸಿದ್ದರು. ಹೊಸಂಗಡಿ ಅಯ್ಯಪ್ಪ ಕ್ಷೇತ್ರ ಅಧ್ಯಕ್ಷರಾದ ಪದ್ಮನಾಭ ಕಡಪ್ಪರ ಕ್ಷೇತ್ರ ಅರ್ಚಕರಾದ ತಿರುಮಲೇಶ ಆಚಾರ್ಯ ಹರೀಶ್ ಶೆಟ್ಟಿ ಮಾಡ ಮುಂತದವರು ಉಪಸ್ಥಿತರಿದ್ದರು . ಅವಿನಾಶ್ ಹೆಗ್ಡ ಸ್ವಾಗತಿಸಿ ಹರೀಶ್ ಶೆಟ್ಟಿ ಮಾಡ ವಂದಿಸಿದರು. ಗಣೇಶೋತ್ಸವ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಸೆಪ್ಟೆಂಬರ್ 7ರಿಂದ 10 ರವರೆಗೆ ವಿವಿಧ ಧಾರ್ಮಿಕ ಸಾಂಸೃತಿಕ ಕಾರ್ಯಕ್ರಮಗಳೊಂದಿಗೆಬಹು ವಿಜ್ರಂಬಣೆಯಿಂದ ನಡೆಯ ಲಿದ್ದು, 10 ರಂದು ಶೋಭಾಯಾತ್ರೆ ನಡೆಯಲಿದ್ದು ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೊರಲಾಯಿತು.


Share with

Leave a Reply

Your email address will not be published. Required fields are marked *