ಚಿಕ್ಕಮಗಳೂರು: ಕಳಸದ ಅರಣ್ಯಾಧಿಕಾರಿಯೊಬ್ಬರು ಹುಲಿ ಉಗುರು ಲಾಕೆಟ್ ಧರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ತವ್ಯದಿಂದ ಅಮಾನತುಗೊಂಡಿದ್ದು, ಅವರನ್ನು ಎನ್.ಆರ್ ಪುರದಲ್ಲಿ ಬಂಧಿಸಲಾಗಿದೆ.
ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಅವರು ಧರಿಸಿದ್ದ ಆಭರಣದಲ್ಲಿ ಹುಲಿ ಉಗುರು ಲಾಕೆಟ್ ಇದ್ದು, ಈ ಅಧಿಕಾರಿಯನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಅರೇನೂರು ಗ್ರಾಮದ ಸುಪ್ರೀತ್ ಹಾಗೂ ಅಬ್ದುಲ್ ಎಂಬವರು ಆಲ್ದೂರು ವಲಯದ ಅರಣ್ಯಾಧಿಕಾರಿಗೆ ದೂರನ್ನು ನೀಡಿದ್ದರು. ಅದರಿಂದ ದರ್ಶನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆಯನ್ನು ನೀಡಲಾಗಿತ್ತು. ದರ್ಶನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದರೂ ಹಾಜರಾಗದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶವನ್ನು ಹೊರಡಿಸಿದ್ದರು.
ಇದೀಗ ಬಾಳೆಹೊನ್ನೂರು ಎ.ಸಿ.ಎಫ್ ಚೇತನ್ ಗಸ್ತಿ, ಕಳಸ ಆರ್ ಎಫ್ ಓ ನಿಶ್ಚಿತ ಅವರ ನೇತೃತ್ವದಲ್ಲಿ ತಂಡ ಡಿ.ಆರ್.ಎಫ್.ಓ. ದರ್ಶನ್ ಅವರನ್ನು ಬಂಧಿಸಿ ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್ಓ) ನಂದೀಶ್ ಅವರ ಮುಂದೆ ಹಾಜರುಪಡಿಸಿದೆ ಎಂದು ತಿಳಿದು ಬಂದಿದೆ.