ಉಡುಪಿ: ಡಯಾನ ಚಿತ್ರಮಂದಿರ ಹತ್ತಿರದ ಮಜಲು ಕೆರೆಯಲ್ಲಿ ಜ.23ರಂದು ವೃದ್ಧರೊರ್ವರ ಶವ ಪತ್ತೆಯಾಗಿದೆ.
ಮೃತರನ್ನು ಕಸ್ತೂರ್ಬಾ ನಗರದ ನಿವಾಸಿ ಕೆ.ಎಸ್. ಸುಂದರ ರಾವ್ (83) ಎಂದು ಗುರುತಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸುಂದರ ಅವರು ಕೆರೆ ಬಳಿ ನಡೆದುಕೊಂಡು ಹೋಗುವಾಗ ಆಯತಪ್ಪಿ ಕೆರೆಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ.
ನಗರ ಪೋಲಿಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮರಿಗೌಡ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡುವರು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಶವ ಸಾಗಿಸಲು ನೆರವಾದರು.