ಅರ್ಥಪೂರ್ಣವಾಗಿ ತನ್ನ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಓಂ ಸಾಯಿ ಗಣೇಶ್ ಸೇವಾ ಟ್ರಸ್ಟ್ ಕಲ್ಲಡ್ಕ

Share with

ಕಲ್ಲಡ್ಕ: ಓಂ ಸಾಯಿ ಗಣೇಶ್ ಸೇವಾ ಟ್ರಸ್ಟ್ ಕಲ್ಲಡ್ಕ ಸೇವಾ ಮನೋಭಾವನೆಯ ಯುವಕರ ತಂಡ ಕಳೆದ 3 ವರ್ಷಗಳಿಂದ ತನ್ನ ಗಳಿಕೆಯಲ್ಲಿ ಒಂದಿಷ್ಟು ಮೊತ್ತವನ್ನು ಮಾಸಿಕವಾಗಿ ಉಳಿತಾಯ ಮಾಡುತ್ತಾ ಆ ಉಳಿತಾಯದಲ್ಲಿ ಸಾಮಾಜಿಕ ಸೇವಾ ಚಟುವಟಿಕೆಯೊಂದಿಗೆ ತನ್ನದೇ ರೀತಿಯಲ್ಲಿ ಕೆಲಸವನ್ನು ಮಾಡಿಕೊಂಡು ಬರುತ್ತಿದೆ.

ಸೇವಾ ಟ್ರಸ್ಟ್ ಈ ವರ್ಷ ಭಾರತ ಸೇವಾಶ್ರಮ ಕನ್ಯಾನದ ಆಶ್ರಮವಾಸಿಗಳಿಗೆ ಒಂದು ದಿನದ ಅನ್ನದಾನದ ವ್ಯವಸ್ಥೆಯನ್ನು ಮಾಡುವುದರ ಮೂಲಕ ವಿಶೇಷವಾಗಿ ಆಚರಿಸಿದರು.

ಯುವಶಕ್ತಿ ಸೇವಾಪಥ ದ.ಕ ಇದರ ಸೇವಾ ಕಾರ್ಯದೊಂದಿಗೆ ಕೈಜೋಡಿಸುತ್ತಾ, ಸಮಾಜಮುಖಿ ಚಿಂತನೆಯಲ್ಲಿ ತೊಡಗಿಸಿಕೊಂಡಿರುವ ಯುವ ಪಡೆ. ಪ್ರತಿ ವರ್ಷವೂ ತನ್ನ ವಾರ್ಷಿಕೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾ ಬರುತ್ತಿರುವ ಸೇವಾ ಟ್ರಸ್ಟ್ ಈ ವರ್ಷ ಭಾರತ ಸೇವಾಶ್ರಮ ಕನ್ಯಾನದ ಆಶ್ರಮವಾಸಿಗಳಿಗೆ ಒಂದು ದಿನದ ಅನ್ನದಾನದ ವ್ಯವಸ್ಥೆಯನ್ನು ಮಾಡುವುದರ ಮೂಲಕ ವಿಶೇಷವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದು ಆಶ್ರಮವಾಸಿಗಳೊಂದಿಗೆ ಸುಖ ಕಷ್ಟವನ್ನು ಹಂಚಿಕೊಂಡು ಆಶ್ರಮದ ಮುಖ್ಯಸ್ಥ ಈಶ್ವರ ಭಟ್ ರವರಿಗೆ 20 ಸಾವಿರದ ಚೆಕ್ ಹಸ್ತಾಂತರಿಸಿದರು. ಈ ತನಕ ಸೇವಾ ಸಂಘದ ಸದಸ್ಯರೆಲ್ಲರ ಸಹಕಾರದೊಂದಿಗೆ ಸುಮಾರು 4,30,975.00 ಮೊತ್ತವನ್ನು ಸಮಾಜದ ಅಶಕ್ತ ಬಡ ಕುಟುಂಬಗಳಿಗೆ ನೀಡಿರುತ್ತಾರೆ.


Share with

Leave a Reply

Your email address will not be published. Required fields are marked *