ಏ.28 ಮತ್ತು ಏ.29 ರಂದು ಮಂಜೇಶ್ವರದ ಶ್ರೀ ಕಿನ್ನಿಮಾರು ತರವಾಡುನಲ್ಲಿ ವರ್ಷಾವಧಿ ಪರ್ವ ಹಾಗೂ ಕೋಲೋತ್ಸವ

Share with

ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಶ್ರೀ ಕಿನ್ನಿಮಾರು ತರವಾಡು, ಪಟ್ಟತ್ತೂರು ಎಂಬಲ್ಲಿ
ತರವಾಡು ಸಾಲಿಯಾನ್ ಕುಟುಂಬಸ್ಥರ ನೇತೃತ್ವದಲ್ಲಿ
ಏ.28 ರವಿವಾರ ಮತ್ತು ಏ.29 ಸೋಮವಾರ ದಂದು
ವರ್ಷಾವಧಿ ಪರ್ವ ಹಾಗೂ ಕೋಲೋತ್ಸವವು
ವಿವಿಧ ವೈದಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬಹು ವಿಜೃಂಭಣೆಯಿಂದ ಜರಗಲಿರುವುದು.

ಈ ಎಲ್ಲಾ ಪುಣ್ಯ ಕಾರ್ಯಕ್ಕೆ ಊರ ಪರವೂರ ಸದ್ಭಕ್ತ ಬಾಂದವರು ಬಂದು ಬಾಗವಹಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಲು ಹಾಗೂ ತರವಾಡಿನ ಕುಟುಂಬಸ್ಥರಾದ ಎಲ್ಲರೂ ಈ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕೆಂದು ಕಲಶಕಾರ ಮತ್ತು ಗುರಿಕಾರರು ಕಿನ್ನಿಮಾರು ತರವಾಡು ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಅಧ್ಯಕ್ಷರು ಹಾಗೂ ಸದಸ್ಯೆಯರು ಮಹಿಳಾ ಸಮಿತಿ ಇವರು ವಿನಮ್ರವಾಗಿ ಕೋರಿದ್ದಾರೆ.

ಕಾರ್ಯಕ್ರಮಗಳು:
ಏ .28 ರಂದು ಬೆಳಿಗ್ಗೆ ಗಂಟೆ 8.00ಕ್ಕೆ ಗಣಹೋಮ ತರವಾಡು ಮನೆಯಲ್ಲಿ (ಮೇಷ ಲಗ್ನದಲ್ಲಿ), ಬೆಳಿಗ್ಗೆ ಗಂಟೆ 9.30ಕ್ಕೆ ಶ್ರೀ ವೆಂಕಟರಮಣ ದೇವರ ಮುಡಿಪು ಶುದ್ಧಿ, ಮಧ್ಯಾಹ್ನ ಗಂಟೆ 1.00ಕ್ಕೆ ಅನ್ನ ಸಂತರ್ಪಣೆ, ಸಾಯಂಕಾಲ ಗಂಟೆ 5.00ಕ್ಕೆ ವರ್ಷಾವಧಿ ಪರ್ವ, ಸಾಯಂಕಾಲ ಗಂಟೆ 7.00ಕ್ಕೆ ಭಗವತಿ ಮಾತೆಯ ದರ್ಶನ, ಪ್ರಸಾದ ವಿತರಣೆ, ರಾತ್ರಿ ಗಂಟೆ 8.00ಕ್ಕೆ ಹೊಸ ಭಗವತಿ ದೈವದ ತೊಡಜಲ್ ನಂತರ ಅನ್ನ ಸಂತರ್ಪಣೆ, ರಾತ್ರಿ ಗಂಟೆ 10.00ಕ್ಕೆ ಹೊಸ ಭಗವತಿ ತೋಟಂ ಜರಗಲಿರುವುದು.

ಏ.29 ಸೋಮವಾರ ದಂದು ಪ್ರಾಥಕಾಲ ಗಂಟೆ 4.00ಕ್ಕೆ
ಹೊಸ ಭಗವತಿ ತೈಯಂ, ನಂತರ ಪ್ರಸಾದ ವಿತರಣೆ,
ಸಂಜೆ ಗಂಟೆ 5.00ಕ್ಕೆ ಮಂತ್ರಾಸ ಗುಳಿಗೆ ದೈವದ ಕೋಲ ನಂತರ ಅನ್ನಸಂತರ್ಪಣೆ, ರಾತ್ರಿ ಗಂಟೆ 9.00ಕ್ಕೆ ಕೊರತಿ ಅಮ್ಮನವರ ಕೋಲ ಪ್ರಸಾದ ವಿತರಣೆ ನೆರವೇರಲಿದೆ.

ಏ.30 ಮಂಗಳವಾರ ದಂದು ಸಂಜೆ ಗಂಟೆ 5.00 ರಿಂದ ಶಕ್ತಿ ಪೂಜೆ ಆರಂಭಗೊಳ್ಳಲಿದೆ.


Share with

Leave a Reply

Your email address will not be published. Required fields are marked *