ಮಂಜೇಶ್ವರ: ಕೆ.ಎಸ್.ಟಿ.ಎ ಮಂಜೇಶ್ವರ ಯೂನಿಟ್ ಸಮ್ಮೇಳನ ಡಿ.19ರಂದು ಹೊಸಂಗಡಿ ವ್ಯಾಪಾರ ಭವನದಲ್ಲಿ ನಡೆಯಲಿದೆ.


ಯೂನಿಟ್ ಅಧ್ಯಕ್ಷ ಗಣೇಶ್ ಪಾವೂರು ಅಧ್ಯಕ್ಷತೆ ವಹಿಸುವರು. ರಾಜ್ಯ ಸದಸ್ಯ ಮೋಹನ್‌ದಾಸ್ ಕುಂಬಳೆ ಉದ್ಘಾಟಿಸುವರು. ತಾಲೂಕು ಅಧ್ಯಕ್ಷ ರಾಮ ಪೊಯ್ಯಕಂಡ, ಯೂನಿಟ್ ಮಾಜಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕುತ್ತನಾಡಿ, ಮಾಜಿ ತಾಲೂಕು ಶೋಶಾಧಿಕಾರಿ ಮನೋಹರ ಶೆಟ್ಟಿ ಕುಂಜತ್ತೂರು, ತಾಲೂಕು ಕೋಶಾಧಿಕಾರಿ ವಿಜಯ ದೇವದಾಸ್ ಶೆಟ್ಟಿ ತೂಮಿನಾಡು ಅತಿಥಿಗಳಾಗಿ ಭಾಗವಹಿಸುವರು.




