ಮಂಜೇಶ್ವರ: ಪೋಲಿಸ್ ವಾಹನವನ್ನು ಕಂಡು ಮಧ್ಯ ಸಹಿತ ಸ್ಕೂಟರನ್ನು ಉಪೇಕ್ಷಿಸಿ ಪರಾರಿಯಾದ ಘಟನೆ ನಡೆದಿದೆ. ಉಪೇಕ್ಷಿಸಿದ ಸ್ಕೂಟರನ್ನು ತಪಾಸಣೆ ಮಾಡುವ ವೇಳೆ ಗೋಣಿ ಚೀಲದಲ್ಲಿ ಇರಿಸಿದ 90 ಮಿಲಿ ಯು 320 ಪ್ಯಾಕೆಟ್ ಮದ್ಯ ಪತ್ತೆಯಾಗಿದೆ.
ನ.15ರಂದು ಸಂಜೆ 6 ಗಂಟೆಗೆ ಮಂಜೇಶ್ವರದ ಕಣ್ವ ತೀರ್ಥ ರೈಲ್ವೆ ಗೇಟ್ ಭಾಗದಿಂದ ಬೀಚ್ ಭಾಗಕ್ಕೆ ಸ್ಕೂಟರ್ ಸಂಚರಿಸುತ್ತಿತ್ತು ಈ ವೇಳೆ ಗಸ್ತು ನಡೆಸುತ್ತಿದ್ದ ಮಂಜೇಶ್ವರ ಠಾಣೆಯ ಎಸ್ಐ ಪ್ರಶಾಂತ್.ಕೆ ಇವರ ವಾಹನವನ್ನು ಕಂಡು ಸವಾರ ಸ್ಕೂಟರ್ ಸಹಿತ ಮದ್ಯವನ್ನು ಉಪೇಕ್ಷಿಸಿ ಪರಾರಿಯಾಗಿದ್ದಾನೆ.
ಸ್ಕೂಟರ್ ಸಹಿತ ಮದ್ಯವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಸವಾರನ ವಿರುದ್ಧ ಕೇಸು ದಾಖಲಿಸಿದ್ದಾರೆ ಆರೋಪಿಯ ಗುರುತು ಪತ್ತೆಯಾಗಿದ್ದು ಕೂಡಲೇ ಸೆರೆ ಹಿಡಿಯುವುದಾಗಿ ಪೊಲೀಸರು ತಿಳಿಸಿದ್ದಾರೆ.