ಕಾನಾಹೊಸಹಳ್ಳಿ : ಕಾನಾಹೊಸಹಳ್ಳಿ ಠಾಣಾ ವ್ಯಾಪ್ತಿಯ ಆಲೂರು ಹುಲಿಕೆರೆ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ50 ರಲ್ಲಿ ಗುರುವಾರ ತಡರಾತ್ರಿ ನಿಂತಿದ್ದ ಲಾರಿಗೆ టిం ట్రావెల్లరా ఒంబదియందే డెశ్మి ಹೊಡೆದ ಪರಿಣಾಮ ಸ್ಥಳದಲ್ಲಿಯೇ ಒಬ್ಬರು ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ.
ಕೃಷ್ಣಪ್ಪ (62 ವರ್ಷ) ಮೃತ ದುರ್ದೈವಿಯಾಗಿದ್ದು టిటి ವಾಹನವು ಕಲಬುರಗಿ ಯಿಂದ IMD ಚಿಕ್ಕಬಳ್ಳಾಪುರ ತಾಲೂಕಿನ ಆರೋಡಿ ಗ್ರಾಮಕ್ಕೆ ತೆರಳುತ್ತಿದ್ದು ಕಲಬರುಗಿಯಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು ಸ್ವ ಗ್ರಾಮ ಆರೋಡಿಗೆ ವಾಪಸು ತೆರಳುವಾಗ ಅಪಘಾತವಾಗಿದ್ದು ಟಿಟಿ ವಾಹನದಲ್ಲಿ ಚಾಲಕ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಹದಿನಾರು ಜನ ಪ್ರಯಾಣಿಸುತ್ತಿದ್ದು, ಕಾನಾಹೊಸಹಳ್ಳಿ ಠಾಣಾ ವ್ಯಪ್ತಿಯ ರಾಷ್ಟ್ರೀಯ ಹೆದ್ದಾರಿ 50 ರ ಆಲೂರು ಹುಲಿಕೆರೆ ಗ್ರಾಮದ ಮದ್ಯ ಗಂಗಾವತಿ ಯಿಂದ ಮೈಸೂರಿಗೆ ಹೊರಟಿದ್ದ ಲಾರಿಯೊಂದು ಕೆಟ್ಟು ನಿಂತಿದ್ದು ನಿಂತಿದ್ದ ಲಾರಿಗೆ ಟಿ ಟಿ ಗಾಡಿ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಟಿಟಿ ವಾಹನದ ಅರ್ದದಷ್ಟು ನಜ್ಜುಗುಜ್ಜಾಗಿದ್ದು ಇಬ್ಬರು ಸಿಲುಕಿಕೊಂಡಿದ್ದು ಅವರನ್ನು ಹೊರ ತೆರೆಯಲು ಹರಸಾಹಸ ಪಡಬೇಕಾಯಿತು. ಕಾನಾಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.