ಕಾಸರಗೋಡು: ಪಿಕಪ್ ವ್ಯಾನ್‌‌ನಲ್ಲಿ ಒಂದು ಕ್ವಿಂಟಾಲ್ ಗಾಂಜಾ ಸಾಗಾಟ; ಇಬ್ಬರ ಬಂಧನ

Share with

ಕಾಸರಗೋಡು: ಪಿಕಪ್ ವ್ಯಾನ್‌‌ನಲ್ಲಿ ಸಾಗಿಸುತ್ತಿದ್ದ ಸುಮಾರು ಒಂದು ಕ್ವಿಂಟಾಲ್ ಗಾಂಜಾವನ್ನು ಅಬಕಾರಿ ದಳದ ವಿಶೇಷ ತಂಡ ಪೆರ್ಲದಿಂದ ವಶ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಸುಮಾರು ಒಂದು ಕ್ವಿಂಟಾಲ್ ಗಾಂಜಾವನ್ನು ಅಬಕಾರಿ ದಳದ ವಿಶೇಷ ತಂಡ ಪೆರ್ಲದಿಂದ ವಶ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಕುಂಬಳೆ ಶಾಂತಿಪಳ್ಳ ದ ಶಹೀನ್ ರಹೀಂ(36) ಮತ್ತು ಪೆರ್ಲ ಅಮ್ಮೆಕ್ಕಳದ ಶರೀಫ್(32) ಬಂಧಿತ ಆರೋಪಿಗಳು. ಅಬಕಾರಿ ದಳದ ಸಿಬ್ಬಂದಿ ಗಳಿಗೆ ಲಭಿಸಿದ ಖಚಿತ ಮಾಹಿತಿಯಂತೆ ಪೆರ್ಲ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಪಿಕಪ್ ವ್ಯಾನ್ ಅನ್ನು ತಡೆದು ತಪಾಸಣೆ ನಡೆಸಿದಾಗ ಸುಮಾರು 107 ಕಿಲೋ ಗಾಂಜಾ ಪತ್ತೆಯಾಗಿದೆ.

ಇನ್ನು ಯಾರಿಗೂ ಸಂಶಯ ಬಾರದಂತೆ ಬಚ್ಚಿಟ್ಟು ಗಾಂಜಾವನ್ನು ಸಾಗಿಸಲಾಗುತ್ತಿತ್ತು. ಆಂಧ್ರ ಪ್ರದೇಶದಿಂದ ಬೆಂಗಳೂರು ಮೂಲಕ ಈ ಗಾಂಜಾವನ್ನು ಕೇರಳಕ್ಕೆ ಸಾಗಿಸಲಾಗುತ್ತಿತ್ತು ಎಂದು ಅಬಕಾರಿ ದಳದ ಸಿಬ್ಬಂದಿಗಳು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *