ಮಂಗಳೂರು: ವಂಚಕರು ಅಪರಿಚಿತ ಮೊಬೈಲ್ ಸಂಖ್ಯೆಯ ಮೂಲಕ ಸಂಪರ್ಕ ಸಾಧಿಸಿ ವ್ಯಕ್ತಿಯೊಬ್ಬರಿಗೆ ಲಾಟರಿ ಹಣ ಬಂದಿರುವುದಾಗಿ ಹೇಳಿ ನಂತರ ವ್ಯಕ್ತಿಯ ಖಾತೆಯಿಂದ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಇಬ್ಬರು ವ್ಯಕ್ತಿಗಳು ಸತ್ಯಂ ಪಾಂಡೆ ಮತ್ತು ಮಿತ್ತಲ್ ಎಂಬ ಹೆಸರಿನಿಂದ ಪರಿಚಯ ಮಾಡಿಕೊಂಡು ವಾಟ್ಸ್ಆ್ಯಪ್ ಮೂಲಕ ತನ್ನ ಜೊತೆ ಮಾತನಾಡಿ ನಿರಂತರ ಸಂಪರ್ಕದಲ್ಲಿದ್ದರು. ಒಂದು ದಿನ ತನಗೆ ಲಾಟರಿ ಹಣ ಬಂದಿದ್ದು, ಆ ಹಣವನ್ನು ಖಾತೆಗೆ ಜಮಾ ಮಾಡಲಾಗುವುದಾಗಿ ತಿಳಿಸಿ ಒಂದು ಮೊಬೈಲ್ ನಂಬರ್ ನೀಡಿ ಬ್ಯಾಂಕ್ ಖಾತೆಗೆ ಲಿಂಕ್ ಮಾಡುವಂತೆ ತಿಳಿಸಿದ್ದರು.
ಇದನ್ನು ನಂಬಿದ ತಾನು ಖಾತೆಗೆ ಲಿಂಕ್ ಮಾಡಿದ್ದೆ. ಬಳಿಕ ಅಪರಿಚಿತರು ತನ್ನ ಗಮನಕ್ಕೆ ತಾರದೆ ಅ.26ರಿಂದ ನ.2ರ ಮಧ್ಯೆ 72,86,916 ಲಕ್ಷ ರೂಪಾಯಿ ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿ ವಂಚಿಸಿದ್ದಾರೆ ಎಂದು ಹಣ ಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.