ಭಾರತದ (India) ಬಹುತೇಕ ನಗರದ ರಸ್ತೆಗಳಲ್ಲಿ ಗಿಜಿಗುಟ್ಟುವ ವಾಹನಗಳು ಹಾಗೂ ಟ್ರಾಫಿಕ್ ಸಮಸ್ಯೆಯನ್ನು ನೀವು ನೋಡಿರುತ್ತೀರಿ. ಇನ್ನು ರಸ್ತೆಯಲ್ಲಿ ವಾಹನಗಳು ನಿಂತರೆ ಹಿಂಬದಿ ವಾಹನ ಸವಾರರು ಹಾರ್ನ್ ಹಾಕುತ್ತಾ ಕಿರಿಕಿರಿ ಮಾಡುತ್ತಾರೆ. ಭಾರತದಲ್ಲಿ ಇದು ಸರ್ವೇ ಸಾಮಾನ್ಯ. ಆದರೆ ಭಾರತೀಯ ವ್ಯಕ್ತಿಯೊಬ್ಬ ಪೋಲೆಂಡ್‌ನಲ್ಲಿ (Poland’s) ಹಾರ್ನ್ ರಹಿತ ವಾಹನ ಚಾಲನೆಯನ್ನು ತೋರಿಸಿದ್ದಾನೆ. ಈ ವಿಡಿಯೋದಲ್ಲಿ ಭಾರತಕ್ಕೆ ಹೋಲಿಸಿದ್ರೆ ಇಲ್ಲಿನ ವಾಹನ ಸಂಚಾರ ಹೇಗೆ ಭಿನ್ನವಾಗಿದೆ ಎಂದು ವಿವರಿಸಿದ್ದಾನೆ.
ಕುನಾಲ್ ದತ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಪೋಲೆಂಡ್‌ನಲ್ಲಿ ವಾಹನಗಳು ನಿರಂತರ ಹಾರ್ನ್‌ಗಳಿಲ್ಲದೆ ಸಂಚಾರದ ಮೂಲಕ ಹೇಗೆ ಸರಾಗವಾಗಿ ಚಲಿಸುತ್ತವೆ ಎಂಬುದನ್ನು ತಿಳಿಸಿದ್ದಾರೆ, ಇದು ಭಾರತದ ಹಾರ್ನ್‌ಗಳಿಂದ ತುಂಬಿರುವ ಬೀದಿಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಅತಿಯಾದ ಹಾರ್ನ್ ಮಾಡುವಿಕೆಯನ್ನು ಸಮರ್ಥಿಸುವ ಚಾಲಕರ ಮೇಲೆ ಹಗುರವಾಗಿ ಚಾಟಿ ಬೀಸಿದ್ದಾರೆ. ಸದ್ದಿಲ್ಲದೆ ಚಲಿಸುವ ಕಾರುಗಳಿಂದ ತುಂಬಿರುವ ಜನನಿಬಿಡ ರಸ್ತೆಯನ್ನು ತೋರಿಸಿದ್ದಾನೆ. ರಸ್ತೆಯಲ್ಲಿ ವಾಹನಗಳಿದ್ದರೂ ಸಹ ಶಬ್ದ ಮಾಲಿನ್ಯವಿಲ್ಲ ಎಂದು ಹೇಳಿದ್ದಾನೆ.





