ನವದೆಹಲಿ: ಯುದ್ಧಪೀಡಿತ ಪ್ರದೇಶವಾದ ಇಸ್ರೇಲ್‌ನಿಂದ ಹೊರಟ ಮೊದಲ ವಿಮಾನದಲ್ಲಿ 212 ಮಂದಿ ಭಾರತೀಯರು ತಾಯ್ನಾಡಿಗೆ ಬಂದಿಳಿದಿದ್ದಾರೆ.
ಆಪರೇಷನ್ ಅಜಯ್ ಕಾರ್ಯಾಚರಣೆಯ ಅಡಿಯಲ್ಲಿ ಇಸ್ರೇಲ್‌ನಿಂದ ಹೊರಟ ವಿಮಾನವು ಶುಕ್ರವಾರ ಬೆಳಿಗ್ಗೆ ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದೆ. ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಪ್ರಯಾಣಿಕರನ್ನು ಆತ್ಮೀಯದಿಂದ ಬರಮಾಡಿಕೊಂಡರು.