ಇಸ್ರೇಲ್‌ನ‌ಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ‘ಆಪರೇಷನ್‌ ಅಜಯ್’ ಕಾರ್ಯಾಚರಣೆ

Share with

ಇಸ್ರೇಲ್‌ನ‌ಲ್ಲಿ ಸಿಲುಕಿರುವ ಭಾರತೀಯರು ತಾಯ್ನಾಡಿಗೆ ಮರಳುವುದಕ್ಕಾಗಿ ‘ಆಪರೇಷನ್‌ ಅಜಯ್’ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.

ನವದೆಹಲಿ: ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಿನ ಕಾಳಗ ಐದನೇ ದಿನಕ್ಕೆ ಮುಂದುವರಿದಿದ್ದು ಇಸ್ರೇಲ್‌ನ‌ಲ್ಲಿ ಸಿಲುಕಿರುವ ಭಾರತೀಯರು ತಾಯ್ನಾಡಿಗೆ ಮರಳುವುದಕ್ಕೆ ಅನುಕೂಲ ಮಾಡಿಕೊಡುವುದಕ್ಕಾಗಿ ‘ಆಪರೇಷನ್‌ ಅಜಯ್’ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಅವರು ಬುಧವಾರ ಘೋಷಣೆ ಮಾಡಿದ್ದಾರೆ.

ಭಾರತೀಯರ ಮೊದಲ ತಂಡವನ್ನು ಹೊತ್ತ ವಿಶೇಷ ವಿಮಾನ ಗುರುವಾರ ಬಂದಿಳಿಯುವ ನಿರೀಕ್ಷೆ ಇದೆ. ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದು ‘ಇಸ್ರೇಲ್‌ನಿಂದ ಮರಳಲು ಇಚ್ಛಿಸುವ ಭಾರತೀಯರಿಗೆ ನೆರವಾಗುವುದಕ್ಕೆ ‘ಆಪರೇಷನ್‌ ಅಜಯ್’ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ವಿಶೇಷ ಖಾಸಗಿ ವಿಮಾನಗಳು ಹಾಗೂ ಇತರ ವ್ಯವಸ್ಥೆಗಳನ್ನು ಮಾಡಲಾಗಿದ್ದು, ವಿದೇಶದಲ್ಲಿರುವ ನಮ್ಮ ಪ್ರಜೆಗಳ ಸುರಕ್ಷತೆಯನ್ನು ಖಾತರಿಪಡಿಸಲು ಬದ್ಧ’ ಎಂದು ಹೇಳಿದ್ದಾರೆ.

‘ಗುರುವಾರ ಹೊರಡಲಿರುವ ವಿಶೇಷ ವಿಮಾನದ ಮೂಲಕ ಭಾರತಕ್ಕೆ ತೆರಳಿರುವ ಮೊದಲ ತಂಡದಲ್ಲಿರುವವರಿಗೆ ಇ–ಮೇಲ್‌ ಮೂಲಕ ಮಾಹಿತಿ ನೀಡಲಾಗಿದೆ’ ಎಂದು ಇಸ್ರೇಲ್‌ನಲ್ಲಿರುವ ಭಾರತ ರಾಯಭಾರ ಕಚೇರಿ ಹೇಳಿದೆ.

‘ಭಾರತಕ್ಕೆ ಮರಳಲು ನೋಂದಣಿ ಮಾಡಿಸಿಕೊಂಡಿರುವ ಇತರರಿಗೆ ಶೀಘ್ರವೇ ಮಾಹಿತಿ ನೀಡಲಾಗುತ್ತದೆ’ ಎಂದು ರಾಯಭಾರ ಕಚೇರಿ ‘ಎಕ್ಸ್‌’ನಲ್ಲಿ ಹೇಳಿದೆ.


Share with

Leave a Reply

Your email address will not be published. Required fields are marked *