ನವದೆಹಲಿ: ‘ಆಪರೇಷನ್ ಸಿಂದೂರ್’ ಅಡಿಯಲ್ಲಿ ಭಾರತದ ನಿಖರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚಿದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ದೇಶದ ಉತ್ತರ ಭಾಗಗಳಲ್ಲಿ ವಿಮಾನ ಪ್ರಯಾಣವು ಬುಧವಾರ ವ್ಯಾಪಕ ಅಡಚಣೆ ಎದುರಿಸಲಿದೆ.ಶ್ರೀನಗರ ವಿಮಾನ ನಿಲ್ದಾಣವನ್ನು ಇಂದು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ದೃಢಪಡಿಸಿದೆ. ಪರಿಣಾಮವಾಗಿ, ಈ ಪ್ರದೇಶದಲ್ಲಿ ಯಾವುದೇ ವಾಣಿಜ್ಯ ವಿಮಾನಗಳು ಹಾರಾಟ ನಡೆಸುವುದಿಲ್ಲ ಅಥವಾ ಇಳಿಯುವುದಿಲ್ಲ..

ಮಧ್ಯರಾತ್ರಿಯಲ್ಲಿ, ಭಾರತೀಯ ವಾಯುಪಡೆಯು “ಆಪರೇಷನ್ ಸಿಂಧೂರ” ಕಾರ್ಯಾಚರಣೆಯನ್ನು ಪ್ರಾರಂಭಿಸಿತು. 12 ಎಸ್‌ಯು-30 ಎಂಕೆಐ ಮತ್ತು 8 ರಫೇಲ್ ಯುದ್ಧವಿಮಾನಗಳು ಪಾಕಿಸ್ತಾನದ ಪಂಜಾಬ್‌ನ ಬಹವಾಲ್ಪುರ್‌ನಲ್ಲಿರುವ ಭಯೋತ್ಪಾದಕ ತರಬೇತಿ ಕೇಂದ್ರವನ್ನು ಗುರಿಯಾಗಿಸಿ ದಾಳಿ ಮಾಡಿದವು.




