ಮಂಗಳೂರು: ಪಡುಬಿದ್ರೆಯ ಅಲಂಗಾರು ಬಳಿ ಒವರ್ ಟೇಕ್ ಭರಾಟೆಯಿಂದ ಮುನ್ನುಗ್ಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಎರಡೂ ಕಾರುಗಳು ಗದ್ದೆಗೆ ಉರುಳಿದ ಘಟನೆ ನಡೆದಿದೆ.
ಕುಂದಾಪುರ ಮೂಲದ ಐ ಟೆನ್ ಕಾರು ಹಾಗೂ ಕೋಟ ಮೂಲದ ಶಿಪ್ಟ್ ಕಾರು ಅಪಘಾತಕ್ಕೆ ತುತ್ತಾಗಿದ್ದು, ಎರಡೂ ಕಾರುಗಳಲ್ಲಿ ಚಾಲಕರು ಮಾತ್ರ ಇದ್ದು, ಶಿಪ್ಟ್ ಕಾರಿನ ಚಾಲಕ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಹೆಜಮಾಡಿ ಟೋಲ್ ಸಿಬ್ಬಂದಿಗಳು ವಾಹನಗಳ ತೆರವು ಕಾರ್ಯವನ್ನು ನಡೆಸಿದ್ದಾರೆ. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆಯನ್ನು ನಡೆಸಿ ವಾಹನಗಳನ್ನು ಠಾಣೆಗೆ ಸಾಗಿಸಲಾಗಿದೆ.