ಉಡುಪಿ: ಅಲೆವೂರು ಮಹಿಳಾ ಸಂಘ ರಾಮಪುರ ಇದರ ನೇತೃತ್ವದಲ್ಲಿ ಅಲೆವೂರು ಯುವಕ ಸಂಘ ರಾಮಪುರ ಇದರ ಸಹಭಾಗಿತ್ವದಲ್ಲಿ ಅಲೆವೂರು ಗ್ರಾಮದ ಹಲವು ಸಂಘಸಂಸ್ಥೆಗಳ ಜೊತೆಯಾಗಿ ಲೋಕ ಕಲ್ಯಾಣಾರ್ಥವಾಗಿ ಏಳನೇ ವರ್ಷದ ಪಾದಯಾತ್ರೆಯನ್ನು ಮಾ.3ರಂದು ಹಮ್ಮಿಕೊಳ್ಳಲಾಗಿತ್ತು.
ಪಡುಅಲೆವೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಿಂದ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದವರೆಗೆ ನಡೆದ ಈ ಪಾದಯಾತ್ರೆಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀರಮಣ ಉಪಾಧ್ಯಾಯ ಚಾಲನೆ ನೀಡಿದರು.
ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್, ಯುವಕ ಸಂಘದ ಗೌರವಾಧ್ಯಕ್ಷ ಆನಂದ ಶೇರಿಗಾರ್, ಮಹಿಳಾ ಸಂಘದ ಗೌರವಾಧ್ಯಕ್ಷೆ ಹರಿಣಾಕ್ಷಿ, ಯುವಕ ಸಂಘದ ಅಧ್ಯಕ್ಷ ಶಂಕರ್ ಶೇರಿಗಾರ್, ಪದಾಧಿಕಾರಿಗಳಾದ ಉಷಾ ಡಿ.ನಾಯಕ್, ರಮಾ ಜೆ.ರಾವ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯಕ್, ಮಂಡಳಿಯ ಸರ್ವ ಸದಸ್ಯರು ಹಾಗೂ ವಿವಿಧ ಭಜನಾ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.