ಪಡುಬಿದ್ರಿ: ಪೇಸ್ಟ್ ಎಂದು ಭಾವಿಸಿ ಇಲಿ ಪಾಷಾಣದಿಂದ ಹಲ್ಲುಜ್ಜಿದ್ದ ವ್ಯಕ್ತಿ ಸಾವು

Share with

ಪಡುಬಿದ್ರಿ: ಪೇಸ್ಟ್ ಎಂದು ಭಾವಿಸಿ ಟ್ಯೂಬ್‌ನಲ್ಲಿದ್ದ ಇಲಿ ಪಾಷಾಣದಿಂದ ಹಲ್ಲುಜ್ಜಿದ್ದ ವ್ಯಕ್ತಿಯೊಬ್ಬರು ಅಸ್ವಸ್ಥರಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ವರದಿಯಾಗಿದೆ.

ಇಲಿ ಪಾಷಾಣದಿಂದ ಹಲ್ಲುಜ್ಜಿದ್ದ ವ್ಯಕ್ತಿ ಸಾವು.

ಇನ್ನಾ ಗ್ರಾಮದ ಮಡ್ಮನ್ ನಿವಾಸಿ ವೆಂಕಪ್ಪ ಪೂಜಾರಿ(53) ಅವರು ನ.1ರಂದು ಬೆಳಿಗ್ಗೆ ಪೇಸ್ಟ್ ಎಂದು ಭಾವಿಸಿ ಟ್ಯೂಬ್‌ನಲ್ಲಿದ್ದ ಇಲಿ ಪಾಷಾಣದಿಂದ ಹಲ್ಲುಜ್ಜಿ ಅಸ್ವಸ್ಥರಾದ ಅವರನ್ನು ಕೂಡಲೇ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ನ.6ರಂದು ಸಾವನ್ನಪ್ಪಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣಾ ವರದಿಯು ತಿಳಿಸಿದೆ.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನಾ ಅವರು ವೆಂಕಪ್ಪ ಪೂಜಾರಿ ಅಕಾಲಿಕ ಸಾವಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.


Share with

Leave a Reply

Your email address will not be published. Required fields are marked *