ಪೈವಳಿಕೆ: ಕೇರಳದಲ್ಲಿ ಅಷ್ಟೇನು ಕಾಣದಂತ ಡ್ರಾಗನ್ ಪ್ರೂಟ್ ಕೃಷಿ ಪೈವಳಿಕೆ ಪಂಚಾಯತ್‌ನ ಬಳ್ಳೂರಿನಲ್ಲಿ ಕುಟುಂಬಶ್ರೀಯ ಮಹಿಳೆಯರ ತಂಡ ಡ್ರಾಗನ್ ಫ್ರೂಟ್ ಕೃಷಿಯಲ್ಲಿಎಲ್ಲರ ಗಮನ ಸೆಳೆಯುತ್ತಿದೆ.
ಬಳ್ಳೂರಿನ ವೀಣಾ ಭಟ್ ಎಂಬವರ ನೇತೃತ್ವದಲ್ಲಿ ಡ್ರಾಗನ್ ಪ್ರೂಟ್ ಕೃಷಿ ಕೈಕೊಂಡಿದ್ದಾರೆ. ಇವರ ಪತಿ ಡಾ.ನಾರಾಯಣ ಭಟ್ ರವರ ಸಹಕಾರದೊಂದಿಗೆ ಕೃಷಿಯನ್ನು ನಡೆಸುತ್ತಿದ್ದಾರೆ. ಉಷ್ಣ ಪ್ರದೇಶದಲ್ಲಿ ಬೆಳೆಯುವಂತ ಪ್ರತ್ಯೇಕ ಗಿಡದಲ್ಲಿ ಆಗುವಂತ ಡ್ರಾಗನ್ ಫ್ರೂಟ್ ಮಲೇಶ್ಯ, ಚೈನ ಮೊದಲಾದ ದೇಶದಲ್ಲಿ ವ್ಯಾಪಕವಾಗಿ ಕೃಷಿ ಬೆಳೆಸಲಗುತ್ತಿದೆ.
ಇದೀಗ ನಮ್ಮ ಊರಿನಲ್ಲಿಯೂ ಮೆಲ್ಲ ಮೆಲ್ಲನೆ ಕೃಷಿ ಆರಂಭವಾಗ ತೊಡಗಿದೆ. ಹಣ್ಣಿನ ಒಳಗಿರುವ ವಸ್ತು ಸೇವಿಸಬಹುದಾಗಿದೆ. ಒಂದು ಗಿಡದಲ್ಲಿ 8 ರಿಂದ 10 ಹಣ್ಣು ಲಭಿಸುತ್ತಿದೆ. ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆಯಿರುವ ಹಣ್ಣು ಇದಾಗಿದೆ. ಒಂದೂವರೆ ವರ್ಷದ ಹಿಂದೆ ಕೃಷಿ ಆರಂಭಿಸಿದ್ದೇವೆ ಒಂದೂವರೆ ಎಕ್ಕರೆ ಸ್ಥಳದಲ್ಲಿ ಕುಟುಂಬಶ್ರೀ ಜಿಲ್ಲಾ ಮಿಶನ್‌ನ ಸಹಾಯದಿಂದ ಕೃಷಿ ಆರಂಭಿಸಿದ್ದು, ಕರ್ನಾಟಕದ ಬೀಜಾಪುರದಿಂದ ಒಂದಕ್ಕೆ ಗಿಡಕ್ಕೆ ನೂರು ರೂಪಾಯಿಯಂತೆ ನೀಡಿ ಗಿಡ ತಂದು ಕೃಷಿ ಮಡುತ್ತಿದ್ದೇವೆ ಹಣ್ಣು ಮಾರಾಟ ಮಾತ್ರವಲ್ಲ ಗಿಡ ಮಾಡಿ ಮಾರಾಟ ಮಾಡುತ್ತಿದ್ದು, ಹಣ್ಣಿಗೆ ಹಾಗೂ ಗಿಡಕ್ಕೆ ಒಳ್ಳೆಯ ಬೇಡಿಕೆ ಇದೆ. ಪ್ರತೀ ವರ್ಷ ಮೇ ತಿಂಗಳಿಂದ ನವೆಂಬರ್ ತಿಂಗಳ ತನಕ ಹಣ್ಣುಬೆಳೆಯುವ ಸಮಯವಾಗಿದೆ. ಕುಟುಂಬಶ್ರೀ ಜಿಲ್ಲಾ ಮಿಶನ್‌ನ ನಿರ್ದೇಶನದಂತೆ 6 ಸಾವಿರ ಗಿಡ ಬೆಳೆಸಿ ಮಾರಾಟ ಮಾಡಿರುವುದಾಗಿ ವೀಣಾ ಭಟ್ ತಿಳಿಸಿದ್ದಾರೆ.