ಪೈವಳಿಕೆ: ಬಾಯಾರಿಪದವಿನಲ್ಲಿ ಪಂಚಾಯತ್ ಸಾರ್ವಜನಿಕ ಸಭೆ

Share with

ಪೈವಳಿಕೆ: ಕೇಂದ್ರ ಸರಕಾರ ಜಾರಿ ಮಾಡುವ ಎಲ್ಲಾ ಜನಪರ ಯೋಜನೆಗಳನ್ನು ಬುಡಮೇಲು ಗೊಳಿಸುವುದು, ಹೆಸರು ಬದಲಾಯಿಸಿ ಯೋಜನೆ ಜನತೆಗೆ ಸಿಗದಂತೆ ಮಾಡುವುದು ರಾಜ್ಯ ಪಿನರಾಯಿ ಸರಕಾರದ ಕುಲ ಕಸುಬು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾ.ಶ್ರೀಕಾಂತ್ ಹೇಳಿದರು.

ಬಿಜೆಪಿ ಪೈವಳಿಕೆ ನಾರ್ತ್ ಸಮಿತಿ ನ.28ರಂದು ಹಮ್ಮಿಕೊಂಡ ಜನ ಪಂಚಾಯತ್ ಸಾರ್ವಜನಿಕ ಸಭೆ.

ಬಾಯಾರಿಪದವಿನಲ್ಲಿ ಬಿಜೆಪಿ ಪೈವಳಿಕೆ ನಾರ್ತ್ ಸಮಿತಿ ನ.28ರಂದು ಹಮ್ಮಿಕೊಂಡ ಜನ ಪಂಚಾಯತ್ ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿದರು. ಖಜಾನೆ ಲೂಟಿ ಒಡೆದಿರುವ ರಾಜ್ಯ ಸರಕಾರ ರಾಜ್ಯ ದಲ್ಲಿ ಸಂಬಳ, ಪೆನ್ಸನ್, ಯಾವುದು ನೀಡುತ್ತಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಪೈವಳಿಕೆ ನಾರ್ತ್ ಸಮಿತಿ ನ.28ರಂದು ಹಮ್ಮಿಕೊಂಡ ಜನ ಪಂಚಾಯತ್ ಸಾರ್ವಜನಿಕ ಸಭೆ.

ಕೀರ್ತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಂಡಲಧ್ಯಕ್ಷ ಆದರ್ಶ ಬಿ ಎಂ, ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮುಖಂಡರಾದ ಎ.ಕೆ ಕಯ್ಯಾರ್, ಮಣಿಕಂಠ ರೈ, ಅಶ್ವಿನಿ ಎಂ ಎಲ್, ಹರಿಶ್ಚಂದ್ರ ಎಂ, ಸದಾಶಿವ ಚೇರಾಲ್, ಪ್ರವೀಣ್ ಚಂದ್ರ ಬಲ್ಲಾಳ್, ಚಂದ್ರಾವತಿ, ಜಯಲಕ್ಷ್ಮಿ ಭಟ್, ಪುಷ್ಪ ಉಪಸ್ಥಿತರಿದ್ದರು. ಗೋಪಾಲ್ ಸಪಾಲ್ಯ ಸ್ವಾಗತಿಸಿ, ಸತ್ಯಶಂಕರ್ ವಂದಿಸಿದರು.


Share with

Leave a Reply

Your email address will not be published. Required fields are marked *