ಪೈವಳಿಕೆ: ನಾಪತ್ತೆಯಾಗಿದ್ದ ಯುವಕನ ಮೃತ ದೇಹ ನಿಗೂಢ ಸ್ಥಿತಿಯಲ್ಲಿ ನಿರ್ಜನ ಪ್ರದೇಶದಲ್ಲಿ ಪತ್ತೆ

Share with

ಪೈವಳಿಕೆ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತ ದೇಹ ನಿರ್ಜನ ಪ್ರದೇಶ ಒಂದರಲ್ಲಿ ನಿಗೂಢವಾಗಿ ಪತ್ತೆಯಾದ ಘಟನೆ ನಡೆದಿದೆ. ಮುಳಿಗದ್ದೆ ತಾಳ್ ತಾಜೆ ಕೊರಗ ಕಾಲನಿ ನಿವಾಸಿ ಮತ್ತಡಿ ಎಂಬವರ ಪುತ್ರ ಗೋಪಾಲ (28) ಎಂಬವರ ಮೃತ ದೇಹ ಕುಡಾನ ಎಂಬಲ್ಲಿ ಖಾಸಗಿ ವ್ಯಕ್ತಿಯ ಕಾಡು ಪೊದೆ ತುಂಬಿದ ಸ್ಥಳದಲ್ಲಿ ನಿಗೂಢವಾಗಿ ಡಿ.6ರಂದು ರಾತ್ರಿ ಪತ್ತೆಯಾಗಿದೆ.

ನಾಪತ್ತೆಯಾಗಿದ್ದ ಯುವಕ

ಮಂಗಳವಾರ ಬೆಳಿಗ್ಗೆ ಇವರು ಮನೆಯಿಂದ ನಾಪತ್ತೆಯಾಗಿದ್ದರು ಸಂಬಂಧಿಕರು ಕಳೆದ ಎರಡು ದಿನಗಳಿಂದ ಹುಡುಕಾಟ ನಡೆಸುತ್ತಿದ್ದು ಈ ಮಧ್ಯೆ ಬುಧವಾರ ರಾತ್ರಿ ಮೃತದೇಹ ಪತ್ತೆಯಾಗಿದೆ.

ಯುವಕನ ಮೃತ ದೇಹ ನಿಗೂಢ ಸ್ಥಿತಿಯಲ್ಲಿ ನಿರ್ಜನ ಪ್ರದೇಶದಲ್ಲಿ ಪತ್ತೆ

ನಾಪತ್ತೆಯಾದ ಬಗ್ಗೆ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಮಂಜೇಶ್ವರ ಠಾಣೆಯ ಸಿ ಐ ರಜೀಶ್, ಎಸ್ ಐ ಗಳಾದ ಪ್ರಶಾಂತ್. ನಿಖಿಲ್ ನೇತೃತ್ವದ ತಂಡ ತಲುಪಿ ಮೃತ ದೇಹದ ಪಂಚನಾಮೆ ನಡೆಸಿ ಮಂಗಲ್ ಪಾಡಿ ತಾಲೂಕು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರು ತಂದೆ, ತಾಯಿ ಸೀತಾ, ಸಹೋದರ ಚಂದಪ್ಪ, ಸಹೋದರಿ ಪವಿತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *