ಪೈವಳಿಕೆ: ಲಾಲ್ಭಾಗ್-ಕೊಮ್ಮಂಗಳ ಲೋಕೋಪಯೋಗಿ ಇಲಾಖೆ ರಸ್ತೆಯ ಉರ್ಮಿ ಎಂಬಲ್ಲಿರುವ ತೋಡಿಗೆ ನಿರ್ಮಿಸಿದ ಸೇತುವೆ ಒಂದು ತುದಿಯ ಅಡಿ ಭಾಗದ ಆಧಾರ ಕಂಬ ಕುಸಿದು ಆತಂಕದ ಸ್ಥಿತಿ ಉಂಟಾಗಿದೆ. ಶನಿವಾರ ದಿಡೀರನೆ ಸೇತುವೆಯ ಕಂಬ ಕುಸಿದು ಬಿದ್ದಿದೆ. ಸೇತುವೆಯ ಒಂದು ತುದಿ ಮಣ್ಣಿನಲ್ಲಿ ನಿಂತಿದೆ. ಕೂಡಲೇ ಆಧಾರ ಕಂಬವನ್ನು ಶೀಘ್ರ ನಿರ್ಮಿಸದಿದ್ದಲ್ಲಿ ಯಾವುದೇ ಕ್ಷಣದಲ್ಲಿ ಸೇತುವೆ ಸಂಪೂರ್ಣ ಕುಸಿದು ಬೀಳಬಹುದಾದ ಆತಂಕ ಊರವರನ್ನು ಕಾಡುತ್ತಿದೆ. ಪೈವಳಿಕೆ, ಮೀಂಜ ಪಂಚಾಯತ್‌ನ್ನು ಸಂಪರ್ಕಿಸುವ ಸೇತುವೆ ಇದಾಗಿದೆ. ಇದೀಗ ಘನ ಘಾತ್ರದ ವಾಹನ ಸಂಚಾರ ಮೊಟಕುಗೊಂಡಿದ್ದು, ದ್ವಿಚಕ್ರ ವಾಹನಗಳು ಆತಂಕದಿದ ಸಂಚರಿಸುತ್ತಿದೆ. ಹಲವಾರು ವರ್ಷದ ಹಿಂದಿನ ಸೇತುವೆ ಇದಾಗಿದೆ. ಲಾಲ್ಭಾಗ್‌ನಿಂದ ಕೊಮ್ಮಂಗಳ, ಬದಿಯಾರ್ ಪಲ್ಲೆಕೂಡೆಲ್ ಸಹಿತ ವಿವಿಧ ಪ್ರದೇಶಗಳಿಗೆ ಬಾಯಿಕಟ್ಟೆ, ಕುರುಡಪದವು ದಾರಿಯಾಗಿ ಸುತ್ತುವರಿದು ಸಂಚರಿಸಬೇಕಾಗಿದೆ. ಈಗಾಗಲೇ ಸ್ಥಳಕ್ಕೆ ವಾರ್ಡ್ ಸದಸ್ಯ ಶ್ರೀನಿವಾಸ ಭಂಡಾರಿ ಭೇಟಿ ನೀಡಿ ಮಾಹಿತಿ ಸಂಗ್ರಸಿದ್ದಾರೆ. ಸಂಬoಧಪಟ್ಟ ಅಧಿಕಾರಿಗಳು ಕೂಡಲೇ ಸೇತುವೆ ದುರಸ್ಥಿಗೆ ಕ್ರಮ ಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.