ಪೈವಳಿಕೆ: ಕಾಡು ಪೊದೆ ಆವರಿಸಿಕೊಂಡು ಮೂಲೆಗುಂಪಾದ ಬಸ್ ತಂಗುದಾಣ

Share with

ಪೈವಳಿಕೆ: ಬಸ್ ತಂಗುದಾಣವೊಂದು ಕಾಡು ಪೊದೆ ಆವರಿಸಿಕೊಂಡು ಜನರ ಪ್ರವೇಶಕ್ಕೆ ದಾರಿಯಿಲ್ಲದೆ ಮೂಲೆಗುಂಪಾಗಿದೆ. ಪೈವಳಿಕೆ ಪಂಚಾಯತ್‌ನ ಬಾಯಾರು-ಕನಿಯಾಲ ರಸ್ತೆಯ ಭಾನುವರ್ಗ ಎಂಬಲ್ಲಿ ಬಸ್ ತಂಗುದಾಣ ಉಪಯೋಗ ಶೂನ್ಯಗೊಂಡಿದೆ. ಕಾಡುಪೊದೆ ಆವರಿಸಿಕೊಂಡಿದೆ.

ಕಾಡು ಪೊದೆ ಆವರಿಸಿಕೊಂಡು ಮೂಲೆಗುಂಪಾದ ಬಸ್ ತಂಗುದಾಣ

ಮಾತ್ರವಲ್ಲ ಈ ಪರಿಸರದಲ್ಲಿ ಚರಂಡಿ ಹಾಗೂ ರಸ್ತೆಯಿಂದ ಎತ್ತರದಲ್ಲಿ ಇರುವುದರಿಂದ ಬಸ್ ತಂಗುದಾಣಕ್ಕೆ ತೆರಳವುದೇ ಸಮಸ್ಯೆಹಾಗೂ ಆತಂಕ ಕೂಡ ಜನರನ್ನು ಕಾಡುತ್ತಿದೆ. ಈ ಬಸ್ ತಂಗುದಾಣ ಅವ್ಯವಸ್ಥೆಯಿಂದ ಕೂಡಿರುವುದಾಗಿ ದೂರಲಾಗಿದೆ. ಇದನ್ನು ಶುಚೀಕರಿಸಿ ಪ್ರವೇಶಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕನಿಯಾಲದಿಂದ ಬಾಯಾರು ಸೊಸೈಟಿ ತನಕ 9 ಬಸ್ ತಂಗುದಾಣವಿದೆ ಇವೆಲ್ಲವೂ ಬಾಯಾರುಪದವು ಭಾಗಕ್ಕೆ ತೆರಳುವಲ್ಲಿದ್ದು, ಈ ಪೈಕಿ ಭಾನುವರ್ಗದಲ್ಲಿ ಒಂದು ಮಾತ್ರ ಕನಿಯಾಲ ಕಡೆಗೆ ತೆರಳುವಲ್ಲಿದೆ. ಕನಿಯಾಲ ಸಮೀಪದಲ್ಲೇಯಿರುವುದರಿಂದ ಈ ಪ್ರದೇಶದ ಜನರು ನಡೆದು ಹೋಗುತ್ತಿದ್ದಾರೆ. ಇದರಿಂದ ಬಸ್ ತಂಗುದಾಣಕ್ಕೆ ಪ್ರಯಣಿಕರು ಪ್ರವೇಶಿಸುವವರ ಸಂಖ್ಯೆ ಕಡಿಮೆ. ರಸ್ತೆಯ ಇನ್ನೊಂದು ಭಾಗದಲ್ಲಿ ಬಸ್‌ತಂಗುದಾಣ ಅಗತ್ಯವೆಂದು ಊರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Share with

Leave a Reply

Your email address will not be published. Required fields are marked *