ಪಂಜ ಮೂಲದ ಯುವಕ ಪಾಂಡಿಚೇರಿಯಲ್ಲಿ ಸಮುದ್ರಪಾಲು

Share with

ಪುತ್ತೂರು: ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸುಳ್ಯ ತಾಲೂಕಿನ ಪಂಜ ಮೂಲದ ಯುವಕನೊಬ್ಬ ಪಾಂಡಿಚೇರಿಯಲ್ಲಿ ಸಮುದ್ರ ಪಾಲಾದ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸುಳ್ಯ ತಾಲೂಕಿನ ಪಂಜ ಮೂಲದ ಯುವಕ.

ಪಂಜದ ಕೂತ್ಕುಂಜ ಗ್ರಾಮದ ಚಿದ್ಗಲ್ಲು ಗೋಪಾಲ್ ಎಂಬವರ ಪುತ್ರ ಬಿಪಿನ್ ನೀರುಪಾಲಾದ ಯುವಕನಾಗಿದ್ದಾನೆ.

ಬಿಪಿನ್ ಬೆಂಗಳೂರಿನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಶನಿವಾರ ಗೆಳೆಯರೊಂದಿಗೆ ಪಾಂಡಿಚೇರಿಗೆ ಹೋಗಿದ್ದು, ನಂತರ ಅಲ್ಲಿನ ಬೀಚ್‌ಗೆ ತೆರಳಿದ್ದ ವೇಳೆ ಸಮುದ್ರಪಾಲಾಗಿದ್ದು, ಭಾನುವಾರ ಯುವಕನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಮೃತರು ತಂದೆ, ತಾಯಿ, ಸಹೋದರಿ ರಚನಾ ಚಿದ್ಗಲ್ ಅವರನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *