ಬಂದ್ಯೋಡು: ಇಲ್ಲಿಗೆ ಸಮೀಪದ ಪಂಜತೊಟ್ಟಿ ಶ್ರೀ ವಿಘ್ನೇಶ್ವರ ಭಜನಾ ಮಂದಿರದಲ್ಲಿ ನೂತನ ವಿಘ್ನೇಶ್ವರ ದೇವರ ಛಾಯಾ ಫಲಕ ಪ್ರತಿಷ್ಟೆ ಮತ್ತು ಸಾನಿಧ್ಯ ಕಲಶೋತ್ಸವದ ಪ್ರಯುಕ್ತ ನಿನ್ನೆ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ. ಗಿರಿಧರ ರಾವ್ ಎಂ.ಎಸ್ ಮಾಣಿಹಿತ್ಲು ಮಂಗಲ್ಪಾಡಿ ಅಧ್ಯಕ್ಷತೆ ವಹಿಸಿದರು. ಆರ್.ಎಸ್.ಎಸ್ ಕಾರ್ಯಕರ್ತ ವೀರಪ್ಪ ಅಂಬಾರು ಧಾರ್ಮಿಕ ಉಪನ್ಯಾಸ ನೀಡಿದರು. ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟಂ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲ ಸುವರ್ಣ, ಕವಿ, ಪತ್ರಕರ್ತ ರಾಧಾಕೃಷ್ಣ.ಕೆ ಉಳಿಯತ್ತಡ್ಕ, ಅಂಬಾರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ವಿಜಯ ಪಂಡಿತ್, ಡಾ.ಅಭಿಲಾಷ್ ಮಯ್ಯ ಅಶೋಕ್‌ನಗರ ನಗರ, ಶಶಿಧರ ಮುಟ್ಟಂ ವಾನಂದೆ ಶಿರಿಯ ಗ್ರಾಮ ಚಾವಡಿ, ಮಂದಿರದ ಪ್ರತಿಷ್ಟಾ ಸಮಿತಿಯ ಪದಾಧಿಕಾರಿಗಳಾದ ದಿವಾಕರ ಆಳ್ವ ಕೆಳಗಿನ ಮನೆ, ಎಂ.ಆರ್ ಕೊರಗಪ್ಪ ಶೆಟ್ಟಿ ಮೇಲಿನ ಮನೆ, ಮೌನೇಶ್ ಆಚಾರ್ಯ ಬೆಜ್ಜಂಗಡಿ, ಬಾಬು ಬಂದ್ಯೋಡು, ನಿವೃತ್ತ ಬ್ಯಾಂಕ್ ಉದ್ಯೋಗಿ ಸಂಜೀವ ಬಂದ್ಯೋಡು, ಸೀತಾರಾಮ ಪಂಜತೊಟ್ಟಿ, ಧರ್ಮಸ್ಥಳ ಯೋಜನೆಯ ಸೇವಾ ಪ್ರತಿನಿಧಿ ಸುಜಾತ, ಮನೋಜ್ ಕುಮಾರ್ ಶೆಟ್ಟಿ ಪಂಜ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಹಾಗೂ ಅಧ್ಯಾಪಕ ರಂಜಿತ್ ಎ.ಎಸ್ ಪೆರ್ಲ ಇವರನ್ನು ಸನ್ಮಾನಿಸಲಾಯಿತು. ಕು.ಆಶಿಕಾ ಪಂಜತೊಟ್ಟಿ ಮತ್ತು ಬಳಗ ಪ್ರಾರ್ಥನೆ ಹಾಡಿದರು. ಕು.ಅಶ್ವಿತ ಪಂಜತೊಟ್ಟಿ ಸ್ವಾಗತಿಸಿ, ಹರೀಶ್.ಸಿ ಪಂಜತೊಟ್ಟಿ ವಂದಿಸಿದರು. ಸಮಾಜ ಸೇವಕ ರಾಮಚಂದ್ರ ಬಲ್ಲಾಳ್, ಶರತ್ ಬೇಕೂರು ನಿರೂಪಿಸಿದರು.