ಪರಶುರಾಮ ನಕಲಿ ಪ್ರತಿಮೆ ಸ್ಥಾಪನೆ ಪ್ರಕರಣ: ಶಾಸಕ ಸುನೀಲ್ ಕುಮಾರ್ ಮತ್ತು ಅಧಿಕಾರಿಗಳನ್ನು ಅಮಾನತುಗೊಳಿಸಲು ಮಿಥುನ್ ರೈ ಆಗ್ರಹ

Share with

ಮಂಗಳೂರು: ಕಾರ್ಕಳದ ಬೈಲೂರಿನಲ್ಲಿ ಅನಧಿಕೃತವಾಗಿ ಪರಶುರಾಮ ಥೀಮ್ ಪಾರ್ಕ್ ಹಾಗೂ ನಕಲಿ ಪರಶುರಾಮ ಪ್ರತಿಮೆ ಸ್ಥಾಪನೆ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಸುನಿಲ್ ಕುಮಾರ್ ಅವರನ್ನು ಬಿಜೆಪಿ ಪಕ್ಷದಿಂದ ಶಾಸಕ ಸ್ಥಾನದಿಂದ ತಕ್ಷಣ ಅಮಾನತುಗೊಳಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಥುನ್ ರೈ.

ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳನ್ನು ಸಹ ಅಮಾನತು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಶುರಾಮನ ವಿಗ್ರಹ ನಿರ್ಮಾಣ ವಿಷಯದಲ್ಲಾಗಿರುವ ಅನ್ಯಾಯ, ಅವ್ಯವಹಾರದ ವಿರುದ್ಧ ಹೋರಾಡಲು ತಾನು ಸಿದ್ಧನಿದ್ದೇನೆ. ಇದಕ್ಕಾಗಿ ಎಲ್ಲ ಸ್ವಾಮೀಜಿಗಳನ್ನು, ಮಠಾಧೀಶರನ್ನು ಭೇಟಿಯಾಗಿ ಅವರ ಬೆಂಬಲ ಪಡೆಯುವ ಅಭಿಯಾನವನ್ನು ಇದೇ ಶುಕ್ರವಾರದಂದು ಪ್ರಾರಂಭ ಮಾಡುತ್ತೇನೆ ಎಂದು ಮಿಥುನ್ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಪುರಸಭಾ ಸದಸ್ಯ ಶುಭೋದ್ ರಾವ್, ಕಾಂಗ್ರೆಸ್ ಪ್ರಮುಖರಾದ ಪ್ರವೀಣ್ ಚಂದ್ರ ಆಳ್ವ, ಎಸಿ ವಿನಯರಾಜ್, ಅನಿಲ್ ಪೂಜಾರಿ, ಪ್ರಕಾಶ್ ಸಾಲಿಯಾನ್, ಮೋಹನ್ ಕೋಟಿಯನ್, ವಿಶ್ವಾಸ್‌ ದಾಸ್, ವಿಕಾಸ್ ಶೆಟ್ಟಿ, ದುರ್ಗಾ ಪ್ರಸಾದ್, ಶಾಂತಲಾ ಗಟ್ಟಿ ಹಾಗೂ ಮತ್ತಿತರರು ಭಾಗವಹಿಸಿದ್ದರು.


Share with

Leave a Reply

Your email address will not be published. Required fields are marked *