ಬೆಂಗಳೂರು: ಇತ್ತೀಚಿಗೆ ಕಲ್ಯಾಣ ಮಂಟಪದವರೆಗೂ ಬಂದ ಹಲವು ಮದುವೆಗಳು ನಾನಾ ಕಾರಣಕ್ಕೆ ಮುರಿದು ಬಿದ್ದಿದೆ. ಆರತಕ್ಷತೆಗೆ ನಿಂತವರು ಮದುವೆ ಮಾಡಿಕೊಳ್ಳಲಿಲ್ಲ. ಮಂಟಪಕ್ಕೆ ಬಂದವರು ತಾಳಿ ಕಟ್ಟಿಸಿಕೊಳ್ಳಲಿಲ್ಲ ಎನ್ನುವ ಸುದ್ದಿಗಳು ಹರಿದಾಡುತ್ತಲೇ ಇದೆ. ಇದರ ನಡುವೆ ಬೆಂಗಳೂರಿನ ದೇವನಹಳ್ಳಿ ಬಳಿ ಈ ರೀತಿ ಮದುವೆ ತಪ್ಪು ಅಂತ ಗೊತ್ತಿದ್ರೂ, ಮಗಳ ಮದುವೆ ನಿಶ್ಚಯ ಮಾಡಿ ಅದ್ದೂರಿಯಾಗಿ ರಿಸೆಪ್ಷನ್ ಮಾಡ್ತಿದ್ದವರಿಗೆ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ರಾತ್ರಿಯೇ ವಧುವನ್ನ ಕರೆದೊಯ್ದಿದ್ದಾರೆ. ಕಾರಣ ಏನು ಗೊತ್ತಾ? ಅಸಲಿಗೆ ಮಂಟಪದಲ್ಲಿ ನಡೆದಿದ್ದು ಏನು ಗೊತ್ತಾ?

ಮದುವೆ ಬ್ರೇಕ್, ಕುಟುಂಬಸ್ಥರಿಗೆ ಶಾಕ್!
ಬೆಂಗಳೂರಿನ ಕೂಗಳತೆಯ ದೂರದಲ್ಲೇ ನಡೀತಿದ್ದ ಬಾಲ್ಯ ವಿವಾಹಕ್ಕೆ ಬ್ರೇಕ್ ಬಿದ್ದಿದೆ ಎಂದು ವರದಿ ಆಗಿದೆ. ರಾತ್ರಿ ಅದ್ಧೂರಿಯಾಗಿ ಆಯೋಜಿಸಲಾಗಿದ್ದ ರಿಸೆಪ್ಷನ್ಗೆ ಅತಿಥಿಗಳ ಬದಲಿಗೆ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಬಂದು ಕುಟುಂಬಸ್ಥರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಬಾಲ್ಯ ವಿವಾಹ ನಿಷೇದದ ನಡುವೆಯೂ ಬಾಲ್ಯ ವಿವಾಹಕ್ಕೆ ಯತ್ನಿಸಿದ್ದವರನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ರು ಎನ್ನಲಾಗ್ತಿದೆ.
ಬಾಲ್ಯ ವಿವಾಹ ತಡೆದ ಅಧಿಕಾರಿಗಳು
ಆರತಕ್ಷತೆ ವೇಳೆ ಕಲ್ಯಾಣ ಮಂಟಪದ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ದಾಳಿ ನಡೆಸಿ ಬಾಲ್ಯ ವಿವಾಹ ತಡೆದಿದ್ದಾರೆ. ದೇವನಹಳ್ಳಿಯ ವಿಜಯಪುರ ಪಟ್ಟಣದ ಚನ್ನಪ್ಪ ಸುಬ್ಬಮ್ಮ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಬಾಲ್ಯ ವಿವಾಹ ಮಾಡಲು ಕುಟುಂಬಸ್ಥರಿ ಸಜ್ಜಾಗಿದ್ರು ಎಂದು ತಿಳಿದುಬಂದಿದೆ.
17 ವರ್ಷದ ಹುಡುಗಿಗೆ ಮದುವೆ
17 ವರ್ಷದ ಹುಡುಗಿಯನ್ನ ಕುಟುಂಬಸ್ಥರು ಒಪ್ಪಿಸಿ ಬಾಲ್ಯ ವಿವಾಹ ಮಾಡುತ್ತಿದ್ದರು ಎನ್ನಲಾಗ್ತಿದೆ. ಮಕ್ಕಳ ಸಹಾಯವಾಣಿ 1098 ನಂಬರ್ಗೆ ಕರೆ ಮಾಡಿ ಬಾಲ್ಯ ವಿವಾಹದ ಬಗ್ಗೆ ಅಪರಿಚಿತರು ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಪ್ರಾಪ್ತೆ ರಕ್ಷಣೆ ಮಾಡಿದ ಅಧಿಕಾರಿಗಳು
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ದಾಳಿ ನಡೆಸಿ ಬಾಲ್ಯ ವಿವಾಹವನ್ನ ತಡೆಯಲಿದ್ದಾರೆ. ಅಪ್ರಾಪ್ತ ಯುವತಿಯನ್ನ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಕಲ್ಯಾಣ ಮಂಟಪ ಮಾಲೀಕರಿಂದಲು ನಿಯಮ ಉಲ್ಲಂಘಿಸಿ ಬಾಲ್ಯ ವಿವಾಹಕ್ಕೆ ಕಲ್ಯಾಣ ಮಂಟಪ ನೀಡಿದ ಆರೋಪ ಕೇಳಿ ಬಂದಿದೆ.
ವರ, ಪೋಷಕರ ವಿರುದ್ಧ ದೂರು
ಅಪ್ರಾಪ್ತೆಯ ಪೋಷಕರು, ಮದುವೆಯಾಗ್ತಿದ್ದ ವರ ಮತ್ತು ಕಲ್ಯಾಣ ಮಂಟಪ ಮಾಲೀಕರ ವಿರುದ್ದ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ದೂರು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.