ಚಲಿಸುತ್ತಿದ್ದ ರೈಲಿನಿಂದ ಪ್ಲಾಟ್‌ಪಾರ್ಮ್‌ಗೆ ಜಾರಿ ಬಿದ್ದ ಪ್ರಯಾಣಿಕನ ರಕ್ಷಣೆ

Share with

ಉಡುಪಿ: ಇಂದ್ರಾಳಿ ರೈಲು ನಿಲ್ದಾಣದಲ್ಲಿ ಬುಧವಾರ ತಡರಾತ್ರಿ ಚಲಿಸುತ್ತಿದ್ದ ರೈಲಿನಿಂದ ಪ್ಲಾಟ್‌ಪಾರ್ಮ್‌ಗೆ ಜಾರಿ ಬಿದ್ದ ಪ್ರಯಾಣಿಕರೊಬ್ಬರನ್ನು ರಕ್ಷಿಸಲಾಗಿದೆ.

ತಿರುವನಂತಪುರದಿಂದ ದಿಲ್ಲಿಯತ್ತ ಸಾಗುತ್ತಿದ್ದ ಅಮೃತಸರ ಎಕ್ಸ್‌ಪ್ರೆಸ್‌ (ನಂ. 12483) ಇಂದ್ರಾಳಿ ನಿಲ್ದಾಣದಲ್ಲಿ ನಿಂತು ಅನಂತರ ಹೊರಡುವಾಗ 49 ವರ್ಷದ ಪ್ರಯಾಣಿಕರೊಬ್ಬರು ಕಾಲುಜಾರಿ ಪ್ಲಾಟ್‌ಫಾರ್ಮ್‌ಗೆ ಬಿದ್ದರು. ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಎಸ್‌ಐ ಸಜು ಯು. ಅವರು ಧಾವಿಸಿ ಬಿದ್ದಿರುವ ವ್ಯಕ್ತಿಯನ್ನು ಮೇಲೆತ್ತುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಅವರ ಆಗಮನ ಸ್ವಲ್ಪವೇ ತಡವಾಗಿದ್ದರೂ ವ್ಯಕ್ತಿಯು ಹಳಿಯ ಮೇಲೆ ಬಿದ್ದು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತಿತ್ತು ಎನ್ನಲಾಗಿದೆ.


Share with

Leave a Reply

Your email address will not be published. Required fields are marked *