
ಆಲೂರು: ಸರ್ಕಾರದಿಂದ ಪೌತಿ ಖಾತಾ ಆಂದೋಲನವನ್ನು ನಡೆಸುತ್ತಿದ್ದು ತಾಲ್ಲೂಕಿನಲ್ಲಿ ಇದುವರೆಗೂ ಖಾತೆ ಮಾಡಿಸದೆ ಇರುವ ರೈತರು ಸಂಬಂಧಪಟ್ಟ ದಾಖಾಲಾತಿಗಳಾದ ವಂಶವೃಕ್ಷ ಮರಣಧೃದೀಕರಣ ಹಾಗೂ ಇತರೆ ದಾಖಲಾತಿ ಸಲ್ಲಿಸಿ ಪೌತಿ ಖಾತೆ, ಮಾಡಿಸಿಕೊಳ್ಳಬೇಕಾಗಿ ಹಾಗೂ ಈ ವಿಚಾರವಾಗಿ ತಮ್ಮ ತಮ್ಮ ಗ್ರಾಮಗಳಲ್ಲಿ ಎಲ್ಲರಿಗೂ ತಿಳಿಹೇಳಬೇಕೆಂದು ಅಲ್ಲಿ ನೆರದಿದ್ದ ರೈತರಿಗೆ ಜನಪ್ರಿಯ ಶಾಸಕರಾದ ಸಿಮೆಂಟ್ ಮಂಜುನಾಥ್ ತಿಳಿಸಿದರು.
ತಾಲೋಕ್ ಕಚೇರಿ ಆವರಣದಲ್ಲಿ ನಡೆದ ತಾಲ್ಲೂಕು ಪೌತಿಖಾತೆ ಅಂದೋಲನಾ ಕಾರ್ಯಕ್ರಮದಲ್ಲಿ ಪೌತಿ ಖಾತೆ ಅರ್ಜಿಗಳನ್ನು ನೀಡಿದ ನಂತರ ಮಾತನಾಡಿದ ಅವರು ಶ್ರೀಘವೇ ಸರ್ಕಾರದ ಅದೇಶದಂತೆ ರೈತರಿಗೆ ನೀಡುವಂತೆ ತಹಶಿಲ್ದಾರ್ ಅವರಿಗೆ ಸೂಚಿಸಿರು.
ತಾಲೂಕು ದಂಡಾಧಿಕಾರಿಗಳು ಮಲ್ಲಿಕಾರ್ಜುನ ಮಾತನಾಡಿ ತಾಲೂಕು ಕಚೇರಿಯ ಕೆಲಸಗಳಲ್ಲಿ ಯಾವುದೇ ಕೆಲಸದಲ್ಲೂ ವಿಳಂಬವಾದಲ್ಲಿ ನನಗೆ ಯಾವುದೇ ಸಮಯದಲ್ಲೂ ಸಹ ರೈತರು ಹಾಗೂ ಸಾರ್ವಜನಿಕರು ನೇರವಾಗಿ ಅಥವಾ ದೂರವಾಣಿ ಮೂಲಕ ದೂರು ಸಲ್ಲಿಸದಲ್ಲಿ ಕೆಲಸ ಮಾಡಲು ವಿಳಂಬ ಮಾಡಿದ ಸಂಬಂಧಪಟ್ಟವರಿಗೆ ಕಾನೂನು ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು, ಹಾಗೂ ಸಂಬಂಧಪಟ್ಟ ರೈತರು ಹಾಗೂ ಸಾರ್ವಜನಿಕರು ದೂರು ನೀಡಿ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಂಧಾಯಅಧಿಕಾರಿಗಳುಸಾರ್ವಜನಿಕರು ಹಾಗೂ ಹೋಬಳಿಯ ಎಲ್ಲಾ ರೈತಪಿ ವರ್ಗದವರು ಹಾಜರಿದ್ದರು.





