ಪೇರಾಲ್ ಕಣ್ಣೂರು: ವಾಚನಾಲಯದ ಮೇಲೆ ಪಟಾಕಿ ಎಸೆದು ಹಾನಿ, ಫ್ಲೆಕ್ಸ್ ನಾಶ..! ಪೊಲೀಸರಿಂದ ಕೇಸು ದಾಖಲು

Share with

ಕುಂಬಳೆ: ಪೇರಾಲ್ ಕಣ್ಣೂರಿನಲ್ಲಿ ಇ.ಕೆ. ನಾಯನಾ‌ರ್ ವಾಚನಾಲಯದ ಮೇಲೆ ಪಟಾಕಿ ಎಸೆದು ಹಾನಿಗೈದ ಪ್ರಕರಣದಲ್ಲಿ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ.

ಶನಿವಾರ ಸಂಜೆ ಯುಡಿಎಫ್ ಕಾರ್ಯಕರ್ತರ ತಂಡ ಈ ಕೃತ್ಯವೆಸಗಿರುವುದಾಗಿ ಸಿಪಿಎಂ ಆರೋಪಿಸಿದೆ. ವಾಚನಾಲಯಕ್ಕೆ ಪಟಾಕಿ ಎಸೆದು ಬಳಿಕ ಪ್ಲೆಕ್ಸ್ ಬೋರ್ಡ್‌ಗಳನ್ನು ನಾಶಗೊಳಿಸಲಾಗಿದೆ. ಅಲ್ಲದೆ ವಾಚನಾಲಯದ ಮುಂದೆ ನಿಂತಿದ್ದ ಹಸೈನಾ‌ರ್ ಕೋರಿತ್ತಳ (52) ಎಂಬವರಿಗೂ ಹಲ್ಲೆಗೈದಿರುವುದಾಗಿ ದೂರಲಾಗಿದೆ.

ಹಸೈನಾರ್ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆ ಬಗ್ಗೆ ಸಿಪಿಎಂ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.


Share with

Leave a Reply

Your email address will not be published. Required fields are marked *