ಮಂಜೇಶ್ವರ ಗ್ರಾ.ಪಂ. ಆಡಳಿತ ವೈಫಲ್ಯವನ್ನು ಎತ್ತಿ
ತೋರಿಸಿ  ಗ್ರಾ.ಪಂಚಾಯಿತಿಗೆ ಭೇಟಿ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೊಂಡ ಪಿಡಿಪಿ ಪ್ರತಿನಿಧಿ ತಂಡ

Share with



ಮಂಜೇಶ್ವರ : ಮಂಜೇಶ್ವರ ಗ್ರಾಮಪಂಚಾಯಿತಿಯ ವಿವಿಧ ಯೋಜನೆಗಳು ಮಧ್ಯದಲ್ಲೇ ಕೈ ಬಿಟ್ಟುಹೋಗಿರುವುದು ಹಾಗೂ ಅದಕ್ಕೊಂದು ಪರಿಹಾರ ಕಾಣದೆ ಇರುವುದನ್ನು ಎತ್ತಿ ತೋರಿಸಿ ಪಿಡಿಪಿ ಪ್ರತಿನಿಧಿ ತಂಡ ಗ್ರಾಮಪಂಚಾಯಿತಿ ಆಡಳಿತ ಸಮಿತಿ ಮತ್ತು ಜನಪ್ರತಿನಿಧಿಗಳನ್ನು ಭೇಟಿಯಾಗಿ ತರಾಟೆಗೆ ತೆಗೆದು  ತಕ್ಷಣ ಇದಕ್ಕೊಂದು ಪರಿಹಾರ ಕಾಣಲು ಒತ್ತಾಯಿಸಿದೆ.

ಮಂಜೇಶ್ವರ ಗ್ರಾಮಪಂಚಾಯಿತಿಯಲ್ಲಿ ದೀರ್ಘಕಾಲದಿಂದ ಚಿಣ್ಣರ ಭವಿಷ್ಯದಲ್ಲಿ ರಾಜಕೀಯ ಆಟವಾಡುತ್ತಿರುವ ಅಂಬಿತ್ತಡಿ ಅಂಗನವಾಡಿ ವಿಷಯವನ್ನು ತಕ್ಷಣ ಪರಿಹರಿಸುವಂತೆ ಪಿಡಿಪಿ ನೇತೃತ್ವ ಒತ್ತಾಯಿಸಿದೆ. ಕುಂಜತ್ತೂರು ತೂಮಿನಾಡು ಸೇರಿದಂತೆ ನಿರ್ಮಾಣ ದೋಷದ ಕಾರಣದಿಂದ ರಸ್ತೆಗಳು ಹದೆಗೆಟ್ಟಿರುವುದನ್ನು ತಕ್ಷಣ ತನಿಖೆ ಮಾಡಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಪಿಡಿಪಿ ಒತ್ತಾಯಿಸಿದೆ.
ತ್ಯಾಜ್ಯ ವಿಲೇವಾರಿಗೆ ವ್ಯವಸ್ಥಿತ ಯೋಜನೆಯನ್ನು ಜ್ಯಾರಿಗೆ ತರದೇ ಇರುವ ವಿಷಯದಲ್ಲಿ ಪ್ರತಿನಿಧಿ ತಂಡ ಕಳವಳವನ್ನು ವ್ಯಕ್ತ ಪಡಿಸಿತು. ಮಂಜೇಶ್ವರದ ಬೀದಿ ಬೀದಿಗಳಲ್ಲಿ ಗುಬ್ಬೆದ್ದು ನಾರುತ್ತಿರುವ ತ್ಯಾಜ್ಯದಿಂದ ಗ್ರಾಮದ ಜನತೆಯೇ ಸಾಂಕ್ರಾಮಿಕ ರೋಗದಿಂದ ಪಡಪಡಿಸುತಿದ್ದರೂ ಆಡಳಿತ ಸಮಿತಿ ಗ್ರಾಮದ ಜನತೆಯ ಮೌನವನ್ನು ಪರೀಕ್ಷಿಸುತ್ತಿರುವುದು ಸರಿ ಅಲ್ಲ ಎಂಬ ಸೂಚನೆಯನ್ನು ನೀಡಿದೆ.

ಹಲವು ಗ್ರಾಮಪಂಚಾಯಿತಿ ರಸ್ತೆಗಳು ವಾಹನ ಸಂಚಾರಕ್ಕೂ ಪಾದಯಾತ್ರೆಗೂ  ಯೋಗ್ಯವಿಲ್ಲದ ಸ್ಥಿತಿಯಲ್ಲಿ ವರ್ಷಗಳಿಂದ ಮುಂದುವರಿದಿದ್ದರೂ, ನಿರ್ಲಕ್ಷ್ಯ ತೋರಿಸುತ್ತಿರುವ ಆಡಳಿತ ಸಮಿತಿಯ ಮತ್ತು ಜನಪ್ರತಿನಿಧಿಗಳ ಜಾಣ ಕುರುಡುತನ ಪ್ರದರ್ಶನ ವಿಷಾದನೀಯವೆಂದು ಪಿಡಿಪಿ ಪ್ರತಿನಿಧಿ ತಂಡ ಗ್ರಾಮಪಂಚಾಯಿತಿ ಆಡಳಿತ ಸಮಿತಿಯ ಗಮನಕ್ಕೆ ತಂದಿದೆ.


Share with

Leave a Reply

Your email address will not be published. Required fields are marked *