ಅಮೆರಿಕ-ಇಸ್ರೇಲ್-ಇರಾನ್ ನಡುವಿನ ಯುದ್ಧ ಭಾರತದ ಇಂಧನ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಾರಂಭಿಸಿವೆ. ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಯುದ್ಧದ ನಡುವೆ ಶೆಲ್ ಕಂಪೆನಿ ತಮ್ಮ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಿದೆ.

ಶೆಲ್ ಪೆಟ್ರೋಲ್ ಬಂಕ್ ಇಂದಿನಿಂದಲೇ ದರ ಹೆಚ್ಚಳ ಮಾಡಿದ್ದು, ಪೆಟ್ರೋಲ್ ಒಂದು ಲೀಟರ್ 106 ಇದ್ದದ್ದು, ಬೆಲೆ ಏರಿಕೆಯಿಂದ ಈಗ 108.42 ಪೈಸೆ ಆಗಿದೆ. ಹಾಗೇ ₹89.34 ಪೈಸೆ ಇದ್ದ ಡೀಸೆಲ್ ಈಗ 93.04 ಪೈಸೆಗೆ ಆಗಿದೆ. ಶೆಲ್ ಮಾದರಿಯಲ್ಲೇ ಉಳಿದ ಕಂಪನಿಗಳ ದರವೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಯುದ್ಧದಿಂದ ವ್ಯಾಪಾರ, ವಹಿವಾಟಿಗೆ ಹೊಡೆತ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಮತ್ತು ಇಸ್ರೇಲ್ ಯುದ್ಧದ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವ್ಯಾಪಾರ, ವಹಿವಾಟಿಗೆ ಹೊಡೆತ ಬಿದ್ದಿದೆ. ಹೋಟೆಲ್, ಪಿಜಿ ಸೇರಿದ ಹಲವು ಉದ್ಯಮಕ್ಕೆ ಗ್ಯಾಸ್ ಅಭಾವ ಉಂಟಾದ ಬೆನ್ನಲ್ಲೇ ಇದೀಗ ಕಮರ್ಷಿಯಲ್ ಗ್ಯಾಸ್ ಕೊರತೆಯಿಂದ ಸ್ಟೀಲ್ ಇಂಡಸ್ಟ್ರೀಸ್ ಸಂಕಷ್ಟಕ್ಕೆ ಸಿಲುಕಿದೆ.




