ಪೆಟ್ರೋಲ್, ಡೀಸೆಲ್, LPG ಬೆಲೆ ಹೆಚ್ಚಿಸುವ ಉದ್ದೇಶವಿಲ್ಲ ಎಂದು ಕೇಂದ್ರ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಇನ್ನೂ 2 ತಿಂಗಳುಗಳ ಕಾಲ ದೇಶಕ್ಕೆ ಸಾಕಾಗುವಷ್ಟು ಕ್ರೂಡ್ ಆಯಿಲ್ ಸಂಗ್ರಹವಿದೆ ಎಂದು ಪೆಟ್ರೋಲಿಯಂ ಇಲಾಖೆ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ತಿಳಿಸಿದ್ದಾರೆ.

2 ತಿಂಗಳ ಹಿಂದೆ ಬ್ಯಾರೆಲ್‌ಗೆ $70 ಇದ್ದ ಕಚ್ಚಾ ತೈಲ ಈಗ 100 ಡಾಲರ್ ದಾಟಿದೆ, ಆದರೂ ನಾವು ಬೆಲೆ ಹೆಚ್ಚಿಸುತ್ತಿಲ್ಲ, ಬೆಲೆ ಏರಿಕೆಯಾಗದಂತೆ ಇತ್ತೀಚೆಗೆ ಅಬಕಾರಿ ಸುಂಕ ಕಡಿತಗೊಳಿಸಿದ್ದೇವೆ ಎಂದಿದ್ದಾರೆ.




