ಉಡುಪಿ: ಮನೆಯೊಂದರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ವಿಡಿಯೋಗ್ರಫಿ ಮಾಡುತ್ತಿರುವಾಗಲೇ ಛಾಯಾಗ್ರಾಹಕರೊಬ್ಬರು ಹಠಾತ್ ಆಗಿ ಕುಸಿದುಬಿದ್ದು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮ ಕುಕ್ಕುಜೆಯಲ್ಲಿ ಫೆ.12ರಂದು ನಡೆದಿದೆ.
ತೆಳ್ಳಾರು ನಿವಾಸಿ ಛಾಯಾಗ್ರಾಹಕ ದೀಪಕ್ ಶೆಟ್ಟಿ (45) ಮೃತ ದುರ್ದೈವಿ. ಇವರು ಕಡ್ತಲ ಗ್ರಾಮ ಕುಕ್ಕುಜೆಯಲ್ಲಿ ಗೃಹಪ್ರವೇಶದ ವಿಡಿಯೋಗ್ರಫಿ ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.