ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಹಾಸ್ಪಿಟಲ್ ಸಾಯನ್ಸ್ ವಿಭಾಗವು ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ “ಕೋಂಟಿನೆಂಟಲ್ ಕ್ಯೂಸಿನ್” ಎಂಬ ಯುರೋಪಿನ ಖಾದ್ಯದ ವಿಷಯಾಧಾರಿತ ಪ್ರಾಯೋಗಿಕ ಕಾರ್ಯಗಾರವನ್ನು ನಡೆಸಿತು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಪ್ರಸಿದ್ಧ ಪಂಚ ತಾರಾ ನೋವೋಟಲ್ ಪಾಕತಜ್ಞಾರಾದ ಪ್ರಜ್ವಲ್ ಬಿ ಕೆ ಇವರು ಪ್ರಾಯೋಗಿಕ ತರಬೇತಿಯನ್ನು ನಡೆಸಿಕೊಟ್ಟರು. ಪಾಶ್ಚಿಮಾತ್ಯ ದೇಶಗಳಲ್ಲಿನ ವಿಶಿಷ್ಟ ಖಾದ್ಯಗಳನ್ನು ತಯಾರಿಸುವ ವಿಧಾನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ವಿದೇಶಿ ರಾಷ್ಟ್ರಗಳಲ್ಲಿನ ಹಾಸ್ಪಿಟಲ್ ಸಾಯನ್ಸ್ ನ ಬೇಡಿಕೆ ಮತ್ತು ಉದ್ಯೋಗದ ವ್ಯಾಪ್ತಿಯನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಪತ್ ಕೆ ಪಕ್ಕಳ ಹಾಗೂ ಆಡಳಿತಾಧಿಕಾರಿಯಾದ ಅರ್ಪಿತ್ ಟಿ ಎ ಭಾಗವಹಿಸಿದರು. ಹಾಸ್ಪಿಟಲ್ ಸಾಯನ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀ ರತ್ನಾಕರ ಪ್ರಭು ಅವರ ಮಾರ್ಗದರ್ಶನದಲ್ಲಿ ಕಾರ್ಯಾಗಾರವು ಯಶಸ್ವಿಯಾಗಿ ಜರುಗಿತು. ಹಾಸ್ಪಿಟಲ್ ಸಾಯನ್ಸ್ ವಿಭಾಗದ ಸಹ ಪ್ರಾಧ್ಯಾಪಕಿ ಯಾದ ಶ್ರುತ ರವರು ಸಲಹೆ, ಸಹಕಾರ ನೀಡಿದರು. ಕಾರ್ಯಕ್ರಮದಲ್ಲಿ ಹಾಸ್ಪಿಟಲ್ ಸಾಯನ್ಸ್ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡರು .ಕಾರ್ಯಕ್ರಮವನ್ನು ಪ್ರಥಮ ಬಿ ಎಚ್ ಎಸ್ ವಿದ್ಯಾರ್ಥಿಯಾದ ಚೇತನ್, ಸ್ವಾಗತಿಸಿ, ನಿರೂಪಿಸಿದರು.