ಜಾನ್ಸಿ(ಉತ್ತರಪ್ರದೇಶ): ಮನೆಯ ಗಾರ್ಡ್ ನಲ್ಲಿ ಮನೆಗೆಲಸದ ಮಹಿಳೆಯ ಮಗುವೊಂದು ಆಟವಾಡುತ್ತಿದ್ದ ಸಂದರ್ಭದಲ್ಲಿ ಕಾಳಿಂಗ ಸರ್ಪ(King Cobra) ಬಂದಿದ್ದು, ಈ ವೇಳೆ ಮಗು ಕಿರುಚಿಕೊಂಡಿತ್ತು. ಆಗ ಮನೆಯ ಪಿಟ್ ಬುಲ್(Pit Bull) ನಾಯಿ ಓಡಿಬಂದು ಹಾವನ್ನು ಕಚ್ಚಿ ಕೊಲ್ಲುವ ಮೂಲಕ ಮಗುವನ್ನು ರಕ್ಷಿಸಿರುವ ಘಟನೆ ಉತ್ತರಪ್ರದೇಶದ ಜಾನ್ಸಿಯ ಶಿವ ಗಣೇಶ್ ಕಾಲೋನಿಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಮನೆಯ ಗಾರ್ಡನ್ ನ ಒಂದು ಮೂಲೆಯಲ್ಲಿ ಪಿಟ್ ಬುಲ್ ಶ್ವಾನ “ಜೆನ್ನಿ”ಯನ್ನು ಕಟ್ಟಿಹಾಕಲಾಗಿತ್ತು. ಆದರೆ ಹಾವನ್ನು ಕಂಡು ಮಗು ಕಿರುಚಾಡುತ್ತಿರುವುದನ್ನು ಗಮನಿಸಿ ಸರಪಳಿಯನ್ನು ಹರಿದುಕೊಂಡು ಬಂದು ಹಾವನ್ನು ಕಚ್ಚಿ ಕೊಂದಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಇದು ವೈರಲ್ ಆಗಿದೆ.
ವಿಡಿಯೋದಲ್ಲಿ, ಪಿಟ್ ಬುಲ್ ಕಾಳಿಂಗ ಸರ್ಪದ ತಲೆಯನ್ನು ಕಚ್ಚಿ ಬಲವಾಗಿ ಅಲ್ಲಾಡಿಸಿ ನೆಲಕ್ಕೆ ಬಡಿಯುತ್ತಿರುವ ದೃಶ್ಯ ಸೆರೆಯಾಗಿದೆ. ಸುಮಾರು ಐದು ನಿಮಿಷಗಳ ಕಾಲ ಕಚ್ಚಿ ಎಳೆದಾಡಿದ ಪರಿಣಾಮ ಹಾವು ಸಾವನ್ನಪ್ಪಿರುವುದು ವಿಡಿಯೋದಲ್ಲಿದೆ.