
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕನ್ ಏರ್ಲೈನ್ಸ್ ವಿಮಾನ ಹಾಗೂ ಯುಎಸ್ ಸೇನಾ ಹೆಲಿಕಾಪ್ಟರ್ ನಡುವೆ ಘರ್ಷಣೆ ಸಂಭವಿಸಿ ವಿಮಾನಗಳು ನದಿಗೆ ಅಪ್ಪಳಿಸಿದ ಪರಿಣಾಮ 67 ಮಂದಿ ಸಾವನ್ನಪ್ಪಿದ್ದು, ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಇದು ತೀವ್ರ ದುಃಖದ ಘಟನೆ ಅಮೆರಿಕದ ಜನರೊಂದಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ.
ಈ ಅಪಘಾತದಲ್ಲಿ 67 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಮಾನದಲ್ಲಿ 64 ಮಂದಿ ಇದ್ದರು. 60 ಮಂದಿ ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು. ಸೇನಾ ಹೆಲಿಕಾಪ್ಟರ್‌ನಲ್ಲಿದ್ದ ಮೂವರು ಸಹ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಅಮೆರಿಕನ್ ಏರ್ಲೈನ್ಸ್ ವಿಮಾನವು ಮಿಲಿಟರಿ ಹೆಲಿಕಾಪ್ಟರ್ಗೆ ಡಿಕ್ಕಿ ಹೊಡೆದ ನಂತರ ಎರಡೂ ವಿಮಾನಗಳು ಅಪಘಾತಕ್ಕೀಡಾಗಿ ಸಾವು- ನೋವು ಸಂಭವಿಸಿದೆ. ಅಮೆರಿಕಾದ ರೊನಾಲ್ಡ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಪೊಟೊಮ್ಯಾಕ್ ನದಿಯಲ್ಲಿ ವಿಮಾನ ಬಿದ್ದಿದೆ. ಈ ನದಿಯಲ್ಲಿ ಶವಗಳು ಪತ್ತೆಯಾಗಿವೆ ಎನ್ನುವ ಮಾಹಿತಿ ಕೂಡಾ ದೊರೆತಿದೆ.