ಮಂಜೇಶ್ವರ: 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಮತವನ್ನು ಹಾಕುವ ಲಕ್ಷಾಂತರ ಯುವ ಮತದಾರರನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ವೀಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡುವ ಕಾರ್ಯಕ್ರಮ ಜ.25ರಂದು ಹೊಸಂಗಡಿಯಲ್ಲಿ ನಡೆಯಿತು.


ವೀಡಿಯೋ ಕಾನ್ಪರೆನ್ಸ್ ಮೂಲಕ ನರೇಂದ್ರ ಮೋದೀಜಿಯವರು ಯುವ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಯುವಮೋರ್ಚಾ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಹೊಸಂಗಡಿ ಪ್ರೇರಣಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷೆ ಅಂಜು ಜೋಸ್ನಿ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ಹರಿಶ್ಚಂದ್ರ ಮಂಜೇಶ್ವರ, ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಅಶ್ವಿನಿ.ಎಂ.ಎಲ್, ಬಿಜೆಪಿ ಮಂಜೇಶ್ವ ಮಂಡಲ ಅಧ್ಯಕ್ಷ ಆದರ್ಶ್.ಬಿ.ಎಂ, ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಕುಂಬಳೆ ಮಂಡಲ ಕಾರ್ಯದರ್ಶಿ ಧನ್‌ರಾಜ್ ಪ್ರತಾಪನಗರ, ಪ್ರದೀಪ್, ಕಿಶೋರ್ ಭಗವತೀ, ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ಕೆ.ಪಿ ಅನಿಲ್ ಕುಮಾರ್, ರವಿರಾಜ್ ಮೊದಲಾದವರು ನೇತೄತ್ವ ವಹಿಸಿದ್ದರು. ಯುವಮೋರ್ಚಾ ಕುಂಬಳೆ ಮಂಡಲ ಅಧ್ಯಕ್ಷ ಅವಿನಾಶ್ ಸ್ವಾಗತಿಸಿ, ಮಂಜೇಶ್ವರ ಮಂಡಲ ಆಧ್ಯಕ್ಷ ರಕ್ಷಣ್ ವಂದಿಸಿದರು.




