ಅಯೋಧ್ಯೆಯ ರಾಮಮಂದಿರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

Share with

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯ ರಾಮಮಂದಿರದ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಮತ್ತು ಜೊತೆಗೆ ಜಗತ್ತಿನಾದ್ಯಂತ ಶ್ರೀರಾಮನ ಕುರಿತು ಬಿಡುಗಡೆ ಮಾಡಿರುವ ಅಂಚೆ ಚೀಟಿಗಳ ಪುಸ್ತಕವನ್ನೂ ಬಿಡುಗಡೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯ ರಾಮಮಂದಿರದ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು.

ಈ ಅಂಚೆಚೀಟಿಯಲ್ಲಿ ರಾಮ ಮಂದಿರ, ರಾಮಾಯಣ ಚೌಪಾಯಿ ‘ಮಂಗಲ್ ಭವನ ಅಮಂಗಲ್ ಹರಿ’, ಸೂರ್ಯ, ಸರಯೂ ನದಿ ಮತ್ತು ದೇವಾಲಯದ ಸುತ್ತಮುತ್ತಲಿನ ಶಿಲ್ಪಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಯೋಧ್ಯೆಯ ರಾಮಮಂದಿರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ

ಬಿಡುಗಡೆಗೊಂಡಿರುವ ಆರು ಅಂಚೆ ಚೀಟಿಗಳು ರಾಮಾಯಣದ ಪ್ರಮುಖ ವ್ಯಕ್ತಿಗಳು ಮತ್ತು ಅಂಶಗಳನ್ನು ಪ್ರತಿನಿಧಿಸುತ್ತವೆ. ಇವುಗಳಲ್ಲಿ ರಾಮ ಮಂದಿರ, ಗಣೇಶ, ಹನುಮಂತ, ಜಟಾಯು, ಕೇವತ್ರಾಜ್ ಮತ್ತು ಮಾ ಶಬರಿ ಬಗ್ಗೆ ಇವೆ.

ಈ 48 ಪುಟಗಳ ಪುಸ್ತಕವು ಯುಎಸ್, ನ್ಯೂಜಿಲೆಂಡ್, ಸಿಂಗಾಪುರ, ಕೆನಡಾ, ಕಾಂಬೋಡಿಯಾ ಮತ್ತು ಯುಎನ್‌ನಂತಹ ಸಂಸ್ಥೆಗಳು ಸೇರಿದಂತೆ 20ಕ್ಕೂ ಹೆಚ್ಚು ದೇಶಗಳು ಬಿಡುಗಡೆ ಮಾಡಿದ ಅಂಚೆಚೀಟಿಗಳನ್ನು ಒಳಗೊಂಡಿದೆ ಎನ್ನಲಾಗಿದೆ

48 ಪುಟಗಳ ಪುಸ್ತಕವು ಯುಎಸ್, ನ್ಯೂಜಿಲೆಂಡ್, ಸಿಂಗಾಪುರ, ಕೆನಡಾ, ಕಾಂಬೋಡಿಯಾ ಮತ್ತು ಯುಎನ್‌ನಂತಹ ಸಂಸ್ಥೆಗಳು ಸೇರಿದಂತೆ 20ಕ್ಕೂ ಹೆಚ್ಚು ದೇಶಗಳು ಬಿಡುಗಡೆ ಮಾಡಿದ ಅಂಚೆಚೀಟಿಗಳನ್ನು ಒಳಗೊಂಡಿದೆ ಎನ್ನಲಾಗಿದೆ

ಸೂರ್ಯನ ಕಿರಣಗಳ ಚಿನ್ನದ ಎಲೆ ಮತ್ತು ‘ರಾಮಾಯಣ ಚೌಪಾಯಿ’ ಈ ಚಿಕ್ಕ ಹಾಳೆಯಲ್ಲಿ ಮೂಡಿ ಬಂದಿದೆ. ‘ಪಂಚಭೂತಗಳು’ ಎಂದು ಕರೆಯಲ್ಪಡುವ ಐದು ಭೌತಿಕ ಅಂಶಗಳು ಅಂದರೆ ಆಕಾಶ, ಗಾಳಿ, ಬೆಂಕಿ, ಭೂಮಿ ಮತ್ತು ನೀರು ವಿವಿಧ ವಿನ್ಯಾಸ ಅಂಶಗಳ ಮೂಲಕ ಪ್ರತಿಫಲಿಸುತ್ತದೆ.


Share with

Leave a Reply

Your email address will not be published. Required fields are marked *