ಪಿಎಂ ವಿದ್ಯಾಲಕ್ಷ್ಮೀ ಯೋಜನೆ; ಕಡಿಮೆ ಬಡ್ಡಿದರದಲ್ಲಿ 10 ಲಕ್ಷ ರೂವರೆಗೆ ಸಾಲ; ಇದು ಕೇಂದ್ರ ಪ್ರಾಯೋಜಿತ ಸ್ಕೀಮ್
ವಿದ್ಯಾರ್ಥಿನಿ

Share with

ಉನ್ನತ ಶಿಕ್ಷಣ ವ್ಯಾಸಂಗಕ್ಕೆ ನೆರವಾಗಲು ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆಂದು ಪಿಎಂ ವಿದ್ಯಾಲಕ್ಷ್ಮೀ ಯೋಜನೆಯನ್ನು (Pradhan Mantri Vidyalaxmi Yojana) ನಡೆಸುತ್ತಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ವತಿಯಿಂದ ನಡೆಸಲಾಗುವ ಈ ಸ್ಕೀಮ್ನಲ್ಲಿ ವಿದ್ಯಾರ್ಥಿಗಳಿಗೆ ಸುಲಭವಾದ ಮತ್ತು ಅಡಮಾನ ರಹಿತವಾದ ಶಿಕ್ಷಣ ಸಾಲವನ್ನು (collateral-free education loan) ಒದಗಿಸಲಾಗುತ್ತದೆ. ಆರ್ಥಿಕ ಅನನುಕೂಲತೆಯ ಕಾರಣದಿಂದ ಪ್ರತಿಭಾನ್ವಿತ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಳಕಳಿಯಿದ ಸರ್ಕಾರ ಈ ಯೋಜನೆ ಆರಂಭಿಸಿದೆ.

ಪಿಎಂ ವಿದ್ಯಾಲಕ್ಷ್ಮೀ ಯೋಜನೆಯ ಮುಖ್ಯಾಂಶಗಳು…

  • ಪದವಿ ಹಾಗೂ ಮೇಲ್ಪಟ್ಟ ಮಟ್ಟದ ಶಿಕ್ಷಣವನ್ನು ಉನ್ನತ ಶಿಕ್ಷಣವೆಂದು ಪರಿಗಣಿಸಲಾಗುತ್ತದೆ. ಸರ್ಕಾರ ಪಟ್ಟಿ ಮಾಡಿದ 800ಕ್ಕೂ ಅಧಿಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಒಂದು ಕೋರ್ಸ್ ಸೇರಿರಬೇಕು.
  • ಮ್ಯಾನೇಜ್ಮೆಂಟ್ ಕೋಟಾದಲ್ಲಿ ಸೀಟು ಪಡೆದಿದ್ದರೆ ವಿದ್ಯಾಲಕ್ಷ್ಮೀ ಸಾಲ ಸಿಗುವುದಿಲ್ಲ.
  • ಅರ್ಹ ವಿದ್ಯಾರ್ಥಿಗೆ 10 ಲಕ್ಷ ರೂವರೆಗೂ ಸಾಲ ಸಿಗುತ್ತದೆ.
  • ಸಾಲಕ್ಕೆ ಬಡ್ಡಿದರವು ಬ್ಯಾಂಕ್ನ ಇಬಿಎಲ್ಆರ್ + ಶೇ. 0.5 ಇರುತ್ತದೆ.
  • 8 ಲಕ್ಷ ರೂ ಒಳಗೆ ವಾರ್ಷಿಕ ಆದಾಯ ಇರುವ ಕುಟುಂಬದ ವಿದ್ಯಾರ್ಥಿಗೆ ಶೇ. 3 ರಿಯಾಯಿತಿ ಸಿಗುತ್ತದೆ.
  • 4,50,000 ರೂಗಿಂತ ಕಡಿಮೆ ಆದಾಯ ಇರುವ ಕುಟುಂಬದ ವಿದ್ಯಾರ್ಥಿಯು ಪಿಎಂ ಉಎಸ್ಪಿ ಸಿಎಸ್ಐಎಸ್ ಅಡಿಯಲ್ಲಿ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್ಗೆ ಸೇರಿದರೆ ಬಡ್ಡಿಯಲ್ಲಿ ಪೂರ್ಣ ವಿನಾಯಿತಿ ಸಿಗುತ್ತದೆ.
  • ಸಾಲ ಮಂಜೂರಾದಂದಿನಿಂದ ಹಿಡಿದು ಓದು ಮುಗಿದು ಒಂದು ವರ್ಷದವರೆಗಿನ ಅವಧಿಯನ್ನು ಮೊರಾಟೋರಿಯಂ ಅವಧಿ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಬಡ್ಡಿ ಗಣಿಸಲಾಗುತ್ತದೆಯಾದರೂ ಕಟ್ಟುವ ಅವಶ್ಯಕತೆ ಇಲ್ಲ. ಮೊರಾಟೋರಿಯಂ ಮುಗಿದ ಬಳಿಕ 15 ವರ್ಷ ಸಾಲ ತೀರಿಸಲು ಅವಕಾಶ ಕೊಡಲಾಗಿರುತ್ತದೆ.
  • ಬಡ್ಡಿ ರಿಯಾಯಿತಿಗೆ ಅರ್ಹರಾಗಿರುವ ವಿದ್ಯಾರ್ಥಿಯು ಓದಿನಲ್ಲಿ ಹಿಂದುಳಿದಿರಬಾರದು.
  • ಇದನ್ನೂ ಓದಿ: ಎನ್ಪಿಎಸ್ ಟಯರ್-1, ಟಯರ್-2 ಅಕೌಂಟ್ಗಳು; ಏನು ವ್ಯತ್ಯಾಸ, ಹೂಡಿಕೆ ಹೇಗೆ? ಇಲ್ಲಿದೆ ಡೀಟೇಲ್ಸ್

ಪಿಎಂ ವಿದ್ಯಾಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಪಿಎಂ ವಿದ್ಯಾಲಕ್ಷ್ಮೀ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಹೋಗಿ: pmvidyalaxmi.co.in/
  • ಇಲ್ಲಿ ವಿದ್ಯಾರ್ಥಿಯಾಗಿ ಲಾಗಿನ್ ಆಗಿ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು.
  • ಇದಾದ ಬಳಿಕ ಮತ್ತೆ ಸ್ಟುಡೆಂಟ್ ಲಾಗಿನ್ ಆಗಿ, ‘ಅಪ್ಲೈ ಫಾರ್ ಎಜುಕೇಶನ್ ಲೋನ್’ ಅನ್ನು ಕ್ಲಿಕ್ ಮಾಡಿ, ಅಲ್ಲಿ ಕೇಳಲಾದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ನಂತರ ಅರ್ಜಿ ಸಲ್ಲಿಕೆ ಮಾಡಿರಿ.

Share with

Leave a Reply

Your email address will not be published. Required fields are marked *