ಹೊಸದಿಲ್ಲಿ: ಬೆಳೆಗಳನ್ನು ನಾಶ ಮಾಡುವ ವಿಷಕಾರಿ ಶಿಲೀಂಧ್ರ (ಪ್ಯುಸಾರಿಯಮ್ ಗ್ರಾಮಿನೇರಂ)ವನ್ನು ಅಮೆರಿಕಕ್ಕೆ ಕಳ್ಳ ಸಾಗಣೆ ಮಾಡಿದ ಆರೋಪದಲ್ಲಿ ಇಬ್ಬರು ಚೀನ ಪ್ರಜೆಗಳನ್ನು ಅಮೆರಿಕದ ತನಿಖಾ ಸಂಸ್ಥೆಗಳು ಬಂಧಿಸಿವೆ. ಅಲ್ಲದೆ, ಇದು ರಾಷ್ಟ್ರೀಯ ಭದ್ರತೆಗೆ ಎದುರಾ ಗಿರುವ ಬೆದರಿಕೆ. ಚೀನಿಯರ ಕೃತ್ಯ”ಕೃಷಿ ಭಯೋತ್ಪಾದನೆ’ ಎಂದು ಬಣ್ಣಿಸಿದೆ.

33 ವರ್ಷದ ಯುನ್ನಿಂಗ್, 34 ವರ್ಷದ ಜುನ್ನೊಂಗ್ ಲಿಯು ಶಿಲೀಂಧ್ರ ತಂದ ಆರೋಪ ಎದುರಿಸುತ್ತಿದ್ದಾರೆ. ಇವರ ವಿರುದ್ಧ ಪಿತೂರಿ, ಕಳ್ಳಸಾಗಣೆ, ಸುಳ್ಳು ಹೇಳಿಕೆ, ವೀಸಾ ವಂಚನೆ ಆರೋಪ ಹೊರಿಸಲಾಗಿದೆ. ಆರೋಪಿಗಳ ಪೈಕಿ ಒಬ್ಬ ಚೀನದ ಕಮ್ಯುನಿಸ್ಟ್ ಪಕ್ಷದ ಸದಸ್ಯನೂ ಆಗಿದ್ದಾರೆ ಎನ್ನಲಾಗಿದೆ.
ಏನಿದು ಫ್ಯುಸಾರಿಯಮ್ ಗ್ರಾಮಿ ನೇರಮ್?:
ಫ್ಯುಸಾರಿಯಮ್ ಗ್ರಾಮಿ ನೇರಂ ಕೊಳೆರೋಗಕ್ಕೆ ಕಾರಣ ವಾಗೋ ಫಂಗಸ್. ಇದು ಗೋಧಿ, ಬಾರ್ಲಿ, ಮೆಕ್ಕೆಜೋಳ, ಭತ್ತದಂತಹ ಆಹಾರ ಬೆಳೆಗಳಲ್ಲಿ ತೆನೆ ಕಟ್ಟದಂತೆ ಮಾಡುತ್ತದೆ. ಶಿಲೀಂಧ್ರವು ವಿಶ್ವ ಆಹಾರ ಪೂರೈಕೆ ಸರಪಳಿ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
ಏನಿದು ಕೃಷಿ ಭಯೋತ್ಪಾದನೆ?
ಆರ್ಥಿಕ ಅಡಚಣೆ, ಆಹಾರ ಕೊರತೆ ಅಥವಾ ಸಾಮಾಜಿಕ ಅಶಾಂತಿ ಉಂಟುಮಾಡುವ ಉದ್ದೇಶದಿಂದ ಒಂದು ದೇಶದ ಆಹಾರ ಪೂರೈಕೆ ಅಥವಾ ಕೃಷಿ ವಲಯಕ್ಕೆ ನಷ್ಟ ಉಂಟು ಮಾಡಲು ಕೀಟಗಳು, ರೋಗಕಾರಕಗಳನ್ನು ಉದ್ದೇ ಶಪೂರ್ವಕವಾಗಿ ಪರಿಚಯಿ ಸುವುದೇ ಕೃಷಿ ಭಯೋತ್ಪಾದನೆ.




