
ಉಪ್ಪಳ: ಮಳೆ ವ್ಯಾಪಕಗೊಂಡಿರುವoತೆ ಕಳ್ಳರ ಹಾವಳಿ ಮತ್ತೆ ವ್ಯಾಪಕಗೊಂಡಿದ್ದು, ಊರವರಲ್ಲಿ ಆತಂಕ ಸೃಷ್ಟಿಯಾಗಿದೆ. ಬದಿಯಡ್ಕ ಠಾಣಾ ವ್ಯಾಪ್ತಿಯ ಧರ್ಮತ್ತಡ್ಕದಲ್ಲಿ ಒಂದು ಅಂಗಡಿ ಕಳವು, ಇನ್ನೊಂದು ಅಂಗಡಿ ಕಳವುಗೆ ಯತ್ನ ನಡೆದಿದೆ. ಧರ್ಮತ್ತಡ್ಕದಲ್ಲಿ ಮೊಹಹಮ್ಮದ್ ಶಿಹಾಬ್ ಎಂಬವರ ಸ್ಟೇಷನರಿ ಹಾಗೂ ಪ್ಯಾನ್ಸಿ ಸಾಮಾಗ್ರಿ ಹೊಂದಿರುವ ಅಂಗಡಿಹಾಗೂ ಪರಿಸರದ ಕುಂಞõಲಿ ಎಂಬವರ ಜೀನ್ಸ್ ಅಂಗಡಿ ಬಾಗಿಲ ಬೀಗವನ್ನು ಮುರಿದಿದೆ. ಈ ಪೈಕಿ ಮೊಹಮ್ಮದ್ ಶಿಹಾಬ್ ಎಂಬವರ ಅಂಗಡಿಯಿoದ ಸುಮಾರು ೩೦ಸಾವಿರ ರೂ ಕಳವು ಹೋಗಿರುವುದಾಗಿ ದೂರಲಾಗಿದೆ. ಜುಲೈ 11ರಂದು ರಾತ್ರಿ ಘಟನೆ ನ ಡೆದಿದ್ದು, ಮರುದಿನ ಬೆಳಿಗ್ಗೆ ಅಂಗಡಿಗೆ ತಲುಪಿದಾಗ ಕಳವು ಕೃತ್ಯ ಗಮನಕ್ಕೆ ಬಂದಿದೆ. ಕಳವು ಕೃತ್ಯದ ಬಗ್ಗೆ ಪೋಲೀಸರಿಗೆ ದೂರು ನೀಡಿದ್ದು, ನಿನ್ನೆ ಸ್ಥಳಕ್ಕೆ ತಲುಪಿ ತನಿಖೆ ನಡೆಸಿದ್ದಾರೆ. ಧರ್ಮತ್ತಡ್ಕದಲ್ಲಿ ಕಳವು ಕೃತ್ಯ ನಡೇದ ದಿನದಂದದೇ ಇಲ್ಲಿಂದ ಸುಮಾರು ಎರಡು ಕಿಲೋ ಮೀಟರ್ ದೂರದ ಮಂಜೇಶ್ವರ ಪೋಲೀಸ್ ಠಾಣಾ ವ್ಯಾಪ್ತಿಯ ಕನಿಯಾಲದಲ್ಲಿಯೂ ಒಂದು ಅಂಗಡಿಯಿAದ ಚಿಲ್ಲರೆ ಹಣ ಹಾಗೂ ಇನ್ನೊಂದು ಅಂಗಡಿ ಕಳವಿಗೆ ಯತ್ನ ನಡೆದಿರುವುದಾಗಿ ತಿಳಿದುಬಂದಿದೆ





