ಯೂಟ್ಯೂಬ‌ರ್ ಸಮೀರ್ ನ ಬಳ್ಳಾರಿ ಮನೆಗೆ ನೋಟೀಸ್ ಅಂಟಿಸಿದ ಪೊಲೀಸರು

Share with

ಬಳ್ಳಾರಿ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದ ಪ್ರಕರಣದಲ್ಲಿ ಯೂಟ್ಯೂಬ‌ರ್ ಸಮೀರ್ ನ ಬಳ್ಳಾರಿ ಮನೆಗೆ ಪೊಲೀಸರು ನೋಟಿಸ್‌ ಅಂಟಿಸಿದ್ದಾರೆ.

ಬೆಳ್ತಂಗಡಿ ಪೊಲೀಸರು ಬಂದು ನಾಳೆ (ರವಿವಾರ ಆ.24) ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.

ಬಳ್ಳಾರಿಯ ಕೌಲಬಜಾರ್ ವ್ಯಾಪ್ತಿಯ ಬಂಡಿ ಹಟ್ಟಿ ಪ್ರದೇಶದಲ್ಲಿರುವ ಮನೆಯಲ್ಲಿದ್ದ ಸಮೀರ್ 2011ರಲ್ಲಿ ಕುಟುಂಬ ಸಮೇತ ಬಳ್ಳಾರಿ ತೊರೆದಿದ್ದರು.

ಆಧಾರ್ ಕಾರ್ಡ್ ನಲ್ಲಿ ಸಮೀರ್ ವಿಳಾಸ ಈವರೆಗೂ ಬಳ್ಳಾರಿ ಎಂದು ನಮೂದಾಗಿರೋ ಹಿನ್ನೆಲೆಯಲ್ಲಿ ಪೊಲೀಸರು ಬೆಂಗಳೂರು ಮತ್ತು ಬಳ್ಳಾರಿ ನಿವಾಸಕ್ಕೆ ನೋಟಿಸ್‌ ಅಂಟಿಸಿದ್ದಾರೆ.

ಮೊದಲಿಗೆ ಸೌಜನ್ಯ ಬಗ್ಗೆ ವಿಡಿಯೋ ಮಾಡಿದ್ದಾಗ ಕೌಲಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಗಲೂ ಇದೇ ಮನೆಗೆ ಬಂದಿದ್ದ ಪೊಲೀಸರು ನಂತರ ಬೆಂಗಳೂರಿಗೆ ತೆರಳಿ ನೋಟಿಸ್‌ ಕೊಟ್ಟಿದ್ದರು.


Share with

Leave a Reply

Your email address will not be published. Required fields are marked *