ಬೆಂಗಳೂರು: ಅಕ್ರಮ ಚಟುವಟಿಕೆ ಹಾಗೂ ಯುವತಿ ಯರಿಗೆ ಅಶ್ಲೀಲ ಬಟ್ಟೆ ತೊಡಿಸಿ ನೃತ್ಯ ಮಾಡಿಸುತ್ತಿದ್ದ ನಗರದ 19 ಡ್ಯಾನ್ಸ್ ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಪಶ್ಚಿಮ ಮತ್ತು ಕೇಂದ್ರ ವಿಭಾಗದ ಪೊಲೀಸರು ದಾಳಿ ನಡೆಸಿ, ಪರಿಶೀಲಿಸಿದ್ದಾರೆ.

ಗುರುವಾರ ರಾತ್ರಿ 11 ವಿಶೇಷ ಪೊಲೀಸ್ ತಂಡಗಳು, ಕಬ್ಬನ್‌ಪಾರ್ಕ್ ಠಾಣೆ ವ್ಯಾಪ್ತಿಯ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿರುವ ಡ್ಯಾನ್ಸ್ ಬಾರ್‌ಗಳು ಹಾಗೂ ಉಪ್ಪಾರ ಪೇಟೆ, ಅಶೋಕನಗರ, ಎಸ್.ಜೆ.ಪಿ ಪಾರ್ಕ್ ಪೊಲೀಸ್ ಠಾಣೆಗಳ ವ್ಯಾಪ್ತಿಯ ಸುತ್ತ ಮುತ್ತಲಿನಲ್ಲಿರುವ 19 ಬಾರ್ ಮತ್ತು ರೆಸ್ಟೋರೆಂಟ್‌ಗಳ ದಾಳಿ ನಡೆಸಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ನಿಯಮ ಉಲ್ಲಂಘಿಸಿ, ಅವಧಿಗೂ ಮೀರಿ ಬಾರ್ ತೆರೆಯುವುದು, ಅಶ್ಲೀಲ ಬಟ್ಟೆ ತೊಡಿಸಿ ಯುವತಿಯರಿಂದ ನೃತ್ಯ ಮಾಡಿಸುತ್ತಿರುವುದು, ಮಹಿಳಾ ಸೆಕ್ಯುರಿಟಿ ಗಾಡ್ `ಗಳನ್ನು ನೇಮಿಸಿಕೊಳ್ಳದಿರುವುದು, ಅಡುಗೆ ಕೋಣೆಯಲ್ಲಿ ಶುಚಿತ್ವ ಪಾಲನೆಯಾಗದಿರುವುದು, ನಿಗದಿತ ಧೂಮಪಾನ ವಲಯ ಗುರುತಿಸಿ ಸ್ಥಳಾವಕಾಶ ಕಲ್ಪಿಸದಿರುವುದು ದಾಳಿ ವೇಳೆ ಕಂಡು ಬಂದಿದೆ.
ಹೀಗಾಗಿ ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಕೋಟ್ನಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಸ್ಥಳದಲ್ಲೇ ದಂಡ ವಿಧಿಸಲಾಗಿದೆ. ಹಾಗೆಯೇ ಅವುಗಳ ಮಾಲಿಕರ ವಿರುದ್ಧ ಮುಂದಿನ ಕ್ರಮಕೈಗೊಳ್ಳಲಾಗಿದೆ.
ದಾಳಿ ವೇಳೆ ಪೊಲೀಸ್ ಇಲಾಖೆ ಹೊರತು ಪಡಿಸಿ ಇತರೆ ಇಲಾಖೆಗಳಾದ ಆರೋಗ್ಯ ಮತ್ತು ಅಬಕಾರಿ ಇಲಾಖೆಗಳಿಗೆ ಸಂಬಂಧಪಟ್ಟಂತೆ ನಿಯಮ ಉಲ್ಲಂಘನೆಯಾಗಿರುವುದು ಕಂಡು ಬಂದಿದ್ದು, ಈ ಇಲಾಖೆಗಳಿಗೆ ನಿಯಮ ಉಲ್ಲಂಘನೆ ಕುರಿತು ಪತ್ರ ಬರೆದು ಸೂಕ್ತ ಕ್ರಮಕೈಗೊಳ್ಳುವಂತೆ ಕೋರಲಾಗಿದೆ. ಅಲ್ಲದೆ, ದಾಳಿಗೊಳಗಾದ ಬಾರ್ ಗಳ ಮೇಲೆ ನಿಗಾವಹಿಸಲಾಗಿದ್ದು, ಮುಂದೆಮತ್ತೆ ನಿಯಮ ಉಲ್ಲಂಘಿಸಿದರೆ ಅಂತಹ ಬಾರ್ ಗಳ ಪರವಾನಿಗೆ ರದ್ದುಗೊಳಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಅಕ್ರಮ ಕಂಡು ಬಂದರೆ ಇನ್‌ಸ್ಪೆಕ್ಟರ್‌ಗಳೇ ಹೊಣೆ:
ಕಮಿಷನರ್ ಎಚ್ಚರಿಕೆ ಕೆಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯು ತ್ತಿದ್ದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ನ್ಯಾಯಾಲಯದ ಅನುಸಾರ ಹಾಗೂ ಪರವಾನಗಿ ಪ್ರಕಾರವೇ ನಡೆಯಬೇಕು. ಅದನ್ನು ಉಲ್ಲಂ ಸಿದ್ದ ಬಾರ್‌ಗಳ ಮೇಲೆ ದಾಳಿ ನಡೆಸಲಾಗಿದೆ. ನಗರದ ಎಲ್ಲಾ ಠಾಣೆಗಳ ಇನ್ ಸ್ಪೆಕ್ಟರ್‌ಗಳಿಗೆ, ತಮ್ಮ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಗಳಿಗೆ ಅವಕಾಶ ಕೊಡಬಾರದು ಎಂದು ಸೂಚಿಸಲಾಗಿದೆ. ಒಂದು ವೇಳೆ ಸ್ಟೇಷನ್ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆ ಕಂಡು ಬಂದರೆ ಇನ್‌ಸ್ಪೆಕ್ಟರ್‌ಗಳೇ ಹೊಣೆ ಎಂದು ಕಮಿ ಷನರ್ ಸೀಮಂತ್ ಕುಮಾರ್ ಸಿಂಗ್ ಎಚ್ಚರಿಸಿದ್ದಾರೆ.




