ಮಣಿಪಾಲ: ಅವಧಿಗೂ ಮೀರಿ ಕಾರ್ಯಾಚರಿಸುತ್ತಿದ್ದ ಪಬ್‌, ಬಾರ್ ಗಳ ಮೇಲೆ ಪೊಲೀಸರ ದಾಳಿ

Share with

ಉಡುಪಿ: ಗ್ಯಾಂಗ್ ವಾರ್ ಪ್ರಕರಣದ ಬಳಿಕ ಮಣಿಪಾಲ ಪೊಲೀಸರು ರಾತ್ರಿ ಗಸ್ತು ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಪಬ್‌ ಬಾರ್‌ಗಳ ಮೇಲೆ ದಾಳಿ ನಡೆಸಿದ್ದಾರೆ.
ಗ್ಯಾಂಗ್‌ ವಾ‌ರ್ ಪ್ರಕರಣದಲ್ಲಿ ಮಾದಕ ದ್ರವ್ಯಗಳ ಬಳಕೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ರಾತ್ರಿ 10 ಗಂಟೆಯ ಬಳಿಕ ತಪಾಸಣೆಗಿಳಿದ ಮಣಿಪಾಲ ಪೊಲೀಸರು, ಅವಧಿಗೂ ಮೀರಿ ಕಾರ್ಯಾಚರಿಸುತ್ತಿದ್ದ ಪಬ್‌ಗಳ ಮೇಲೆ ರೈಡ್ ಮಾಡಿ ಅಕ್ರಮ ಚಟುವಟಿಕೆ, ಮಾದಕ ದ್ರವ್ಯಗಳ ಸೇವನೆಗೆ ಅವಕಾಶ ನೀಡದಂತೆ ಎಚ್ಚರಿಕೆ ನೀಡಿದರು. ತಡ ರಾತ್ರಿ ವಿನಾ ಕಾರಣ ಅಲೆದಾಡುವವರಿಗೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇನ್ನೊಂದೆಡೆ ಎಲ್ಲ ಅಂಗಡಿಗಳನ್ನು ರಾತ್ರಿ 10ಗಂಟೆಯೊಳಗೆ ಮುಚ್ಚುವಂತೆ ಸೂಚನೆ ನೀಡಲಾಗಿದ್ದರೂ ಕೆಲವು ಹೊಟೇಲ್, ಬಾರ್, ರೆಸ್ಟೋರೆಂಟ್‌ಗಳು ತಡರಾತ್ರಿಯವರೆಗೂ ವ್ಯವಹಾರ ನಡೆಸಿಕೊಂಡಿರುವುದು ಸಾರ್ವಜನಿಕರ ಆಕ್ಷೇಪಣೆಗೆ ಕಾರಣವಾಗಿದೆ.
ಬಾರ್ ಹಾಗೂ ಪಬ್‌ಗಳಿಗೂ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಜತೆಗೆ 80 ಬಡಗಬೆಟ್ಟು, ಪೆರಂಪಳ್ಳಿ, ಈಶ್ವರನಗರ, ಅಲೆವೂರು, ಮಂಚಿ, ಮಣಿಪಾಲ ಭಾಗಗಳಲ್ಲಿ ಗಾಂಜಾ ಸಹಿತ ಮಾದಕ ವ್ಯಸನದ ಹಾವಳಿಯೂ ಅಧಿಕವಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಪೊಲೀಸರು ಈ ನಿಟ್ಟಿನಲ್ಲಿಯೂ ಕಾರ್ಯಾಚರಣೆ ನಡೆಸುವ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *