ಉಪ್ಪಳ: ಹಲವು ಪ್ಲಾಟ್‌ಗಳ ಮಲಿನ ಜಲವನ್ನು ರಾಜಾರೋಷವಾಗಿ ಸಾರ್ವಜನಿಕ ರಸ್ತೆಗೆ ಹರಿದು ಬಿಡುತ್ತಿರುವುದು ಊರವಲ್ಲಿ ಆತಂಕ ಸೃಷ್ಟಿಯಾಗಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪತ್ವಾಡಿ ರಸ್ತೆಯ ಮಜಲ್ ಎಂಬಲ್ಲಿ ರಸ್ತೆಯಲ್ಲಿ ಮಲಿನ ಜಲ ಹರಿದುಹೋಗುತ್ತಿದೆ. ಇಲ್ಲಿ ಹಲವು ವ್ಯಾಪಾರಸ್ಥರು ಹಾಗೂ ದಿನನಿತ್ಯ ನಡೆದಾಡುವ ನೂರಾರು ಜನರು, ವಾಹನ ಸಂಚಾರ ವಿರುವ ಜನನಿಬಿಡ ಪ್ರದೇಶವಾಗಿದ್ದು, ದುರ್ವಾಸನೆಯಿಂದ ಮೂಗಿಗೆ ಕೈಹಿಡಿದು ತೆರಳುವಂತ ಪರಿಸ್ಥಿತಿ ಉಂಟಾಗಿದೆ. ಈ ಪರಿಸರದಲ್ಲಿ ಕಾರ್ಯಚರಿಸುತ್ತಿರುವ ಮೂರು ಪ್ಲಾಟ್‌ಗಳ ಮಲಿನ ಜಲವನ್ನು ಹಲವು ವರ್ಷಗಳಿಂದ ರಸ್ತೆಗೆ ಬಿಡಲಾಗುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಚರಂಡಿಗೆ ಪೈಪ್ ಅಳವಡಿಸಿ ಟ್ಯಾಂಕ್‌ನಲ್ಲಿ ತುಂಬಿದ ಮಲಿನ ಜಲವನ್ನು ಮೋಟಾರ್ ಪಂಪ್‌ನಿAದ ಬಿಡಲಾಗುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ಕೃತ್ಯ ಹಲವು ವರ್ಷಗಳಿಂದ ನಡೆಯುತ್ತಿದ್ದು, ಕಳೆದ ಮೂರು ತಿಂಗಳಿAದ ಚರಂಡಿಯಲ್ಲಿ ಕಸ ಕಡ್ಡಿಗಳು ತುಂಬಿಕೊAಡಿರುವುದರಿAದ ಮಲಿನ ನೀರು ರಸ್ತೆಯಲ್ಲಿಯೇ ಹರಿದು ಹೋಗುತ್ತಿರುವುದು ಸ್ಥಳೀಯರಲ್ಲಿ ಮಾರಕ ರೋಗದ ಭೀತಿಯನ್ನುಂಟುಮಾಡಿದೆ. ಈ ಬಗ್ಗೆ ಪ್ಲಾಟ್ ಮಾಲಕರಲ್ಲಿ ಸ್ಥಳೀಯರು ಮನವಿ ಮಾಡಿದರೂ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಪಂಚಾಯತ್, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರನ್ನು ನೀಡಿದ್ದಾರೆ. ಅಧಿಕಾರಿಗಳು ಬಂದು ಪರಿಶೀಲಿಸಿ ಹೋದವರು ಮತ್ತೆ ಈ ಭಾಗಕ್ಕೆ ಬರಲಿಲ್ಲವೆಂದು ಊರವರು ತಿಳಿಸಿದ್ದಾರೆ. ಸಂಬAಧಪಟ್ಟ ಅಧಿಕಾರಿ ವರ್ಗದವರು ಕೂಡಲೇ ಕ್ರಮಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.