ಬಡಕುಟುಂಬದ ಮನೆ ಬೆಂಕಿಗಾಹುತಿ: ಅಪಾರ ನಾಶನಷ್ಟ

Share with

ಮಂಜೇಶ್ವರ:  ಬಡಕುಟುಂಬದ ಹೆಂಚು ಹಾಸಿದ ಮನೆಯೊಂದು ಬೆಂಕಿಗಾಹುತಿಯಾಗಿ ಅಪಾರ ನಾಶ ನಷ್ಟ ಸಂಭವಿಸಿದ ಘಟನೆ ನಡೆದಿದೆ. ವರ್ಕಾಡಿ ಗ್ರಾಮ ಪಂಚಾಯತ್‌ನ ೧೫ನೇ ವಾರ್ಡ್ ತಚ್ಚಿರೆ ನಿವಾಸಿ ಅಬ್ದುಲ್ ಕಾದರ್ ಎಂಬವರ ಮನೆ ರಾತ್ರಿ ಸುಮಾರು ೮ಗಂಟೆಗೆ ಬೆಂಕಿ ತಗಲಿ ಉರಿದಿದೆ.  ವಿದ್ಯುತ್ ಶಾಟ್ ಸರ್ಕೀಟ್‌ನಿಂದ ಬೆಂಕಿ ತಗಲಿರುವುದಾಗಿ ಅಂದಾಜಿಸಲಾಗಿದೆ.  ದೃಷ್ಟಿ ದೋಷದಿಂದ ಬಳಲುತ್ತಿರುವ ಅಬ್ದುಲ್ ಕಾದರ್ ಹಾಗೂ ಅವರ ಸಹೋದರಿ ನೆಬೀಸ ಮನೆಯಲ್ಲಿದ್ದರು. ಬೆಂಕಿ ತಗಲಿದ ಬಗ್ಗೆ ತಿಳಿದು ಹೊರಗಡೆ ಓಡಿ ಬೊಬ್ಬೆ ಹಾಕಿದ್ದಾರೆ. ಸ್ಥಳಕ್ಕೆ ಸ್ಥಳೀಯರು ಹಾಗೂ ಉಪ್ಪಳ ಅಗ್ನಿ ಶಾಮಕದಳ ತಲುಪಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಮೇಲ್ಚಾವಣಿ ಪೂರ್ತಿ ಉರಿದು ನಾಶಗೊಂಡಿದೆ. ಅಲ್ಲದೆ ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು, ಕಪಾಟ್, ವಯರಿಂಗ್, ಹಣ, ದಾಖಲೆ ಪತ್ರಗಳು ಉರಿದುಹೋಗಿದೆ. ಸುಮಾರು ೩ಲಕ್ಷ ರೂ ನಾಶ ನಷ್ಟಅಂದಾಜಿಸಲಾಗಿದೆ. ಇದರಿಂದ ಬಡಕುಟುಂಬ ಸಂಕಷ್ಟಕ್ಕೀಡಾಗಿದೆ.


Share with

Leave a Reply

Your email address will not be published. Required fields are marked *