ಐಎಂಎ ಯ ನೂತನ ಅಧ್ಯಕ್ಷರಾಗಿ ಜನಪ್ರಿಯ ವೈದ್ಯ ಡಾ.ಬಿ.ನಾರಾಯಣ ನಾಯ್ಕ್ ಆಯ್ಕೆ

Share with

ಕಾಸರಗೋಡು ಐಎಂಎ ಯ ನೂತನ ಅಧ್ಯಕ್ಷರಾಗಿ ಜನಪ್ರಿಯ ವೈದ್ಯ ಡಾ.ಬಿ.ನಾರಾಯಣ ನಾಯ್ಕ್ ಆಯ್ಕೆಗೊಂಡಿದ್ದಾರೆ. ಅವರು ಈ ಹಿಂದೆ ಐಎಂಎ ಕಾಸರಗೋಡು ಜಿಲ್ಲಾ ಸಂಚಾಲಕರಾಗಿದ್ದರು. ನೂತನ ಜಿಲ್ಲಾ ಸಂಚಾಲಕರಾಗಿ ಕಾಞಂಗಾಡು ಜನರಲ್ ಆಸ್ಪತ್ರೆಯ ಸೀನಿಯರ್ ಕನ್ಸಲ್ಟೆಂಟ್ ಡಾ. ವಿ. ವಿನೋದ್ ಕುಮಾರ್ ಆಯ್ಕೆಗೊಂಡಿದ್ದಾರೆ.
ಐಎಂಎ ಕೇರಳ ಪ್ರಾಂತ್ಯ ಘಟಕ ಈ ನೇಮಕಾತಿ ನಡೆಸಿದೆ.

ಮೂಲತಃ ಎಣ್ಮಕಜೆ ಗ್ರಾಮಪಂಚಾಯತಿನ ಏಳ್ಕಾನ ಬಾಳೆಗುಳಿಯವರಾದ ಡಾ.ಬಿ. ನಾರಾಯಣ ನಾಯ್ಕರು ಕಾಸರಗೋಡಿನಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸಂಘಟನೆಯನ್ನು ಬೆಳೆಸುವಲ್ಲಿ ಮತ್ತು ನಿರಂತರ ಚಟುವಟಿಕೆ ನಡೆಸುವಲ್ಲಿ ಗಮನೀಯ ಕೊಡುಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಐ.ಎಂ ಎ ಕೇರಳ ರಾಜ್ಯ ಘಟಕ ಅವರಿಗೆ ಅತ್ಯುತ್ತಮ Out Standing Leadership ಪ್ರಶಸ್ತಿ ನೀಡಿ ಗೌರವಿಸಿತ್ತು.

ಎಣ್ಮಕಜೆ ಪಂಚಾಯತಿನ ಏಳ್ಕಾನ ಬಾಳೆಗುಳಿ ದಿ.ರಾಭ ನಾಯ್ಕ್ -ದಿ. ಲಕ್ಷ್ಮಿ ಅವರ ಪುತ್ರನಾದ ನಾರಾಯಣ ನಾಯ್ಕರು 1993ರಲ್ಲಿ ಕೇರಳ ಸರಕಾರಿ ಆರೋಗ್ಯ ಇಲಾಖೆಗೆ ಸೇರ್ಪಡೆಗೊಂಡಿದ್ದರು. ಬಳಿಕ ಭಡ್ತಿ ಪಡೆಯುತ್ತಾ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗದ ಮುಖ್ಯಸ್ಥರಾಗಿ 2022 ಡಿ.31ರಂದು ನಿವೃತ್ತರಾಗಿದ್ದರು.

ನಿರಂತರ ಸೃಜನಶೀಲ ಪ್ರವೃತ್ತಿಯಿಂದ ಐಎಂಎ ಸಂಘಟನೆಗಾಗಿ ಅವಿರತ ದುಡಿಯುವ ಅವರು ಕಾಸರಗೋಡು ಐಎಂಎಯನ್ನು ಎತ್ತರಕ್ಕೇರಿಸಿ, ಬಲಿಷ್ಠಗೊಳಿಸಿ, ರಾಷ್ಟ್ರೀಯ ಮಟ್ಟದಲ್ಲೇ ಗಮನಿಸುವಂತೆ ಮಾಡುವಲ್ಲಿ ಮಹನೀಯ ಕೊಡುಗೆ ನೀಡಿದ್ದಾರೆ.


Share with